Wednesday, November 13, 2024

ದೇಶಾದ್ಯಂತ 6ನೇ ಹಂತದ ಮತದಾನ – ಗೌತಮ್​ ಗಂಭೀರ್ ಸೇರಿ ಪ್ರಮುಖರು ಕಣದಲ್ಲಿ..!

ನವದೆಹಲಿ: ಇಂದು ದೇಶಾದ್ಯಂತ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯಲಿದ್ದು, 6 ರಾಜ್ಯ, ಒಂದು ಕೇಂದ್ರಾಡಳಿತ ಕ್ಷೇತ್ರದಲ್ಲಿ ಜನ ಹಕ್ಕು ಚಲಾಯಿಸಲಿದ್ದಾರೆ. ದೇಶದ 59 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಉತ್ತರ ಪ್ರದೇಶದ 14 ಕ್ಷೇತ್ರ, ಹರಿಯಾಣದ 10 ಕ್ಷೇತ್ರ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳದ ತಲಾ 8 ಕ್ಷೇತ್ರ, ದೆಹಲಿಯ 7 ಮತ್ತು ಜಾರ್ಖಂಡ್​ನ 4 ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ.

ಬೆಳಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ. 6ನೇ ಹಂತದ ಮತದಾನದಲ್ಲಿ ಅಖಾಡದಲ್ಲಿ ಘಟಾನುಘಟಿಗಳು ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್​ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಬಿಜೆಪಿಯ ಪ್ರಜ್ಞಾ ಸಿಂಗ್​ ಠಾಕೂರ್, ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್, ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಕೇಂದ್ರ ಸಚಿವರಾದ ಮನೇಕಾ ಗಾಂಧಿ, ಡಾ.ಹರ್ಷವರ್ಧನ್, ರಾಧಾ ಮೋಹನ್ ಸಿಂಗ್, ನರೇಂದ್ರ ಸಿಂಗ್ ತೋಮರ್, ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​, ಬಾಕ್ಸರ್​ ವಿಜೇಂದರ್​ ಸಿಂಗ್ ಸೇರಿದಂತೆ ಹಲವರು ಕಣದಲ್ಲಿದ್ದಾರೆ.

6ನೇ ಹಂತದ ಮತದಾನ ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, 2014ರ ಚುನಾವಣೆಯಲ್ಲಿ ಈ 59 ಕ್ಷೇತ್ರಗಳ ಪೈಕಿ ಬಿಜೆಪಿ 45 ಕ್ಷೇತ್ರ ಗೆದ್ದಿತ್ತು. ಈ ಬಾರಿಯೂ ಅದೇ ಹುಮ್ಮಸ್ಸಿನಲ್ಲಿರುವ ಕೇಸರಿ ಪಡೆ ಅಷ್ಟೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ತವಕದಲ್ಲಿದೆ.

RELATED ARTICLES

Related Articles

TRENDING ARTICLES