ಕಲಬುರ್ಗಿ: ಮೇ 23ರ ನಂತರ ರಾಜ್ಯದಲ್ಲಿ ಭೂಕಂಪನವಾಗುತ್ತೆ ಅಂತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಚಿಂಚೋಳಿಯಲ್ಲಿ ಮಾತನಾಡಿದ ಅವರು, “ಫಲಿತಾಂಶದ ಬಳಿಕ 20 ಶಾಸಕರು ಬಿಜೆಪಿಗೆ ಬರುತ್ತಾರೆ. ಕಾಂಗ್ರೆಸ್‌ನ 20 ಶಾಸಕರು ಬಿಜೆಪಿಗೆ ಬರುವುದು ಪಕ್ಕಾ ಆಗಿದೆ. ಫಲಿತಾಂಶ ಬಂದ್ಮೇಲೆ ಕಾಂಗ್ರೆಸ್ ಮನೆಯೊಂದು 3 ಬಾಗಿಲು ಆಗಲಿದೆ. ಮೇ 23ರಂದು ಲೋಕಸಭಾ ಚುನಾವಣೆಯ ರಿಸಲ್ಟ್ ಹೊರಬಿದ್ದ ನಂತರ ಭಸ್ಮಾಸುರ ಯಾರೆಂದು ಗೊತ್ತಾಗುತ್ತೆ’’ ಅಂತ ಹೇಳಿದ್ರು.