ಮಂಡ್ಯ: ಮೈತ್ರಿ ಸರ್ಕಾರ ಬಗ್ಗೆ ಮತ್ತೆ ಅಪಸ್ವರ ಕೇಳಿಬಂದಿದೆ. ನಮಗೆ ಹೊಂದಾಣಿಕೆ ಅಗತ್ಯವಿರಲಿಲ್ಲ, ಲಾಭಕ್ಕಿಂತ ನಮಗೆ ಲಾಸ್ ಹೆಚ್ಚಾಗಿದೆ ಅಂತ ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ದೋಸ್ತಿ ವಿರುದ್ಧ ಗುಡುಗಿದ್ದಾರೆ.
“ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಪರವಾಗಿ ಪ್ರಚಾರ ಮಾಡಿಲ್ಲ. ‘ಕೈ’ ಮುಖಂಡ ಕೆ.ಬಿ. ಚಂದ್ರಶೇಖರ್ ನಮ್ಮ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಕೆ.ಆರ್. ಪೇಟೆ ತಾಲೂಕಿನಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಂದ ನಮಗೆ ಅನುಕೂಲವಾಗಿಲ್ಲ” ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ನಾಯಕ ನಾರಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ನಾರಾಯಣ ಗೌಡ ಏನ್ ಹೇಳೋದು. ಹೈಕಮಾಂಡ್ ಮತ್ತು ಜೆಡಿಎಸ್ ವರಿಷ್ಠರು ತೀರ್ಮಾನ ಕೈಗೊಂಡಿದ್ದಾರೆ” ಎಂದು ತಿರುಗೇಟು ಕೊಟ್ಟಿದ್ದಾರೆ.