ಕಲಬುರಗಿ : ‘ಮೈತ್ರಿ ಸರ್ಕಾರ ಬಿದ್ದೋಗುತ್ತೆ ಅಂತ ದಯವಿಟ್ಟು ಹೇಳಬೇಡಿ. ನಂಗೆ ಸಿಎಂ ಆಗೋ ಕನಸಿಲ್ಲ ಅಂತ ಎರಡು ದಿನಗಳ ಹಿಂದಷ್ಟೇ ಹೇಳಿದ್ದರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ. ಆದರೆ, ಇಂದು ಅವರೇ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದು ಬಿಟ್ಟಿದ್ದಾರೆ..!
ಇಂದು ಕಲಬುರಗಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ‘ದೋಸ್ತಿ ಸರ್ಕಾರದ ಭವಿಷ್ಯವನ್ನು 20 ಶಾಸಕರು ನಿರ್ಧರಿಸ್ತಾರೆ. ಮೇ.23 ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತ್ರ ರಾಜ್ಯದಲ್ಲಿ ಏನ್ ಬೇಕಾದ್ರೂ ಆಗ್ಬಹುದು. ಕಾಂಗ್ರೆಸ್ನ ಪಕ್ಷದಲ್ಲಿ 20 ಶಾಸಕರು ಅಸಮಧಾನ ಹೊಂದಿದ್ದಾರೆ ಅಂತ ಹೇಳಿದ್ದಾರೆ.
ಸರ್ಕಾರ ಬೀಳಲಿ ಅಂತ ನಾನು ಹಗಲುಗನಸು ಕಾಣ್ತಿಲ್ಲ. ಅವರವರೇ ಹೊಡೆದಾಡಿಕೊಂಡು ಸರ್ಕಾರ ಬೀಳಿಸ್ತಾರೆ ಅಂತ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಆ 20 ಶಾಸಕರು ನಿರ್ಧರಿಸ್ತಾರಾ ‘ದೋಸ್ತಿ’ ಭವಿಷ್ಯ? ಯಡಿಯೂರಪ್ಪ ಅವರು ನುಡಿದಿರುವ ಭವಿಷ್ಯ ಸತ್ಯವಾಗುತ್ತಾ ಅನ್ನೋದು ಕುತೂಹಲ.
ಆ 20 ಶಾಸಕರು ನಿರ್ಧರಿಸ್ತಾರಾ ‘ದೋಸ್ತಿ’ ಭವಿಷ್ಯ?
TRENDING ARTICLES