ಹುಬ್ಬಳ್ಳಿ : ಲೋಕಸಭಾ ಎಲೆಕ್ಷನ್ ರಿಸೆಲ್ಟ್ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯಲ್ಲ. ಹೊಸ ಸರ್ಕಾರ ರಚನೆಯಾಗುತ್ತದೆ ಅಂತ ಬಿಜೆಪಿಯವರು ಹೇಳುತ್ತಲೇ ಬರ್ತಿದ್ದಾರೆ. ಆದರೆ, ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ‘ದೋಸ್ತಿ ಸರ್ಕಾರ ಪತನವಾಗುತ್ತೆ ಅಂತ ಯಾರೂ ಹೇಳಿಕೆ ನೀಡಬೇಡಿ’ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಕೈ ಮುಗಿದು ಪ್ರಾರ್ಥಿಸಿಕೊಂಡಿದ್ದಾರೆ..!
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಮೈತ್ರಿ ಸರ್ಕಾರದ ಪತನದ ಮಾತು ಬೇಡವೇ ಬೇಡ..! ನಾನು ಮುಖ್ಯಮಂತ್ರಿ ಆಗುವ ಕನಸು ಕಂಡಿಲ್ಲ. ಮೇ.23ರಂದು ದೇಶದ ಜನರು ಅಂತಿಮ ತೀರ್ಪು ನೀಡುತ್ತಾರೆ. ಜನತೆಯ ತೀರ್ಪಿನ ಬಳಿಕ ಮುಂದಿನ ನಿರ್ಧಾರ ಮಾಡೋಣ. ದೋಸ್ತಿ ಸರ್ಕಾರ ಪತನವಾಗುತ್ತೆ ಅಂತ ಯಾರೂ ಹೇಳಿಕೆ ನೀಡಬೇಡಿ’ ಎಂದಿದ್ದಾರೆ.
ಮೈತ್ರಿ ಸರ್ಕಾರದ ಪತನದ ಮಾತು ಬೇಡ್ವೇ ಬೇಡ ಅಂದ್ರು ಬಿಎಸ್ವೈ..!
TRENDING ARTICLES