Friday, May 10, 2024

ಬ್ಯಾಗ್ ತೂಕ ಇಳಿಸಲು ಸರ್ಕಾರ ನಿರ್ಧಾರ : ಖಾಸಗಿ ಶಾಲೆಗಳ ನಕಾರ..!

ಬೆಂಗಳೂರು : ಶಾಲಾ ಮಕ್ಕಳ ಬ್ಯಾಗ್​ಗಳ ತೂಕಕ್ಕೆ ಸರ್ಕಾರ ಮಿತಿ ಹೇರಿದೆ. ಸರ್ಕಾರಿ ಶಾಲೆಗಳಲ್ಲದೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೂ ಅನ್ವಯವಾಗುವಂತೆ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಆದರೆ, ಸರ್ಕಾರದ ಕ್ರಮಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಖಾಸಗಿ ಶಾಲಾ-ಸಂಘ ಸಂಸ್ಥೆಗಳು ‘ಅವೈಜ್ಞಾನಿಕ ಚಿಂತನೆಯಿಂದ ಸರ್ಕಾರ ಆದೇಶ ಮಾಡಿದ್ದು, ಪುನರ್​ ಪರಿಶೀಲನೆ ಮಾಡುವಂತೆ ಒತ್ತಾಯಿಸಿವೆ.
ತರಗತಿ ಅನುಗುಣವಾಗಿ ಸರ್ಕಾರವು ಮಕ್ಕಳಿಗೆ ಬ್ಯಾಗ್​ ಭಾರವನ್ನು ನಿಗಧಿಪಡಿಸಿದ್ದು, ಅದರ ಅನ್ವಯ, 1-2ನೇ ತರಗತಿ ಮಕ್ಕಳ ಬ್ಯಾಗ್​ ಭಾರ 1.5 ಕೆಜೆಯಿಂದ 2 ಕೆಜಿ, 3-5 ನೇತರಗತಿ ಮಕ್ಕಳ ಬ್ಯಾಗ್ ತೂಕ 2-3 ಕೆಜಿ, 6-8ನೇ ತರಗತಿ ಮಕ್ಕಳ ಬ್ಯಾಗ್​ ತೂಕ 3-4 ಕೆಜಿ, 9-10ನೇ ತರಗತಿ ಮಕ್ಕಳ ಬ್ಯಾಗ್​ ಭಾರ 4-5 ಕೆಜಿ ಮಾತ್ರ ಇರತಕ್ಕದ್ದು ಅಂತ ಸರ್ಕಾರ ಆದೇಶ ಹೊರಡಿಸಿದೆ.
ಅಷ್ಟೇಅಲ್ಲದೆ 1-2ನೇ ತರಗತಿ ಮಕ್ಕಳ ಕೈಯಲ್ಲಿ ಮನೆಗೆಲಸ ಮಾಡಿಸುವಂತಿಲ್ಲ. ಮಕ್ಕಳು ನೀರಿನ ಬಾಟಲಿಯನ್ನು ತರೋದು ಬೇಡ, ಬದಲಾಗಿ ಶಾಲೆಯಲ್ಲೇ ಶುದ್ಧ ಕುಡಿಯೋ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ತಿಂಗಳ 3ನೇ ಶನಿವಾರವನ್ನು ಬ್ಯಾಗ್​ ರಹಿತ ದಿನವನ್ನಾಗಿ ಆಚರಿಸಬೇಕು ಅನ್ನೋದು ಸೇರಿದಂತೆ ನಿಯಮಗಳನ್ನು ಕೂಡ ಜಾರಿಗೆ ತಂದಿದೆ.

RELATED ARTICLES

Related Articles

TRENDING ARTICLES