Saturday, October 26, 2024

ನಾಲ್ಕನೇ ಹಂತದ ಮತ ಹಬ್ಬ – 72 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಈಗಾಗಲೇ ಮೂರು ಹಂತದಲ್ಲಿ ಮತದಾನ ಮುಗಿದಿದೆ. ನಾಲ್ಕನೇ ಹಂತದ ಮತದಾನ ಭರದಿಂದ ಸಾಗಿದೆ. ಇಂದು 9 ರಾಜ್ಯಗಳ 72 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅದಕ್ಕಾಗಿ ಭದ್ರತಾ ವ್ಯವಸ್ಥೆಯನ್ನೂ ಸಜ್ಜುಗೊಳಿಸಲಾಗಿದೆ. ಇಂದು ನಾಲ್ಕನೇ ಹಂತದ ಮತದಾನ ಶುರುವಾಗಿದ್ದು, ಇಂದು 961 ಅಭ್ಯರ್ಥಿಗಳ ಭವಿಷ್ಯವನ್ನ ಮತದಾರ ನಿರ್ಧರಿಸಲಿದ್ದಾನೆ.     

ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 17 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ರಾಜಸ್ಥಾನದಲ್ಲಿ 13, ಉತ್ತರಪ್ರದೇಶದಲ್ಲಿ 13, ಪಶ್ಚಿಮ ಬಂಗಾಳದಲ್ಲಿ 8, ಮಧ್ಯಪ್ರದೇಶದಲ್ಲಿ 6, ಒಡಿಶಾದಲ್ಲಿ 6 ಆದ್ರೆ, ಬಿಹಾರದಲ್ಲಿ 5, ಜಾರ್ಖಂಡ್‌ನಲ್ಲಿ 3 ಹಾಗೂ ಜಮ್ಮು-ಕಾಶ್ಮೀರದ ಅನಂತ್‌ನಾಗ ಕ್ಷೇತ್ರಕ್ಕೂ ಇಂದೇ ಮತದಾನ ನಡೆಯಲಿದೆ.

ಮೊದಲ ಮೂರು ಹಂತದ ಮತದಾನದಲ್ಲಿ 302 ಕ್ಷೇತ್ರಗಳಿಗೆ ಈಗಾಗಲೇ ಮತದಾನ ನಡೆದಿದೆ. ಇಂದು 72 ಕ್ಷೇತ್ರಗಳಿಗೆ ವೋಟಿಂಗ್‌ ನಡೆದರೆ ಉಳಿದ ಮೂರು ಹಂತಗಳಲ್ಲಿ 168 ಕ್ಷೇತ್ರಗಳಿಗೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 9 ರಾಜ್ಯಗಳಲ್ಲಿ ಈಗಾಗಲೇ ಕೇಂದ್ರ ಚುನಾವಣಾ ಆಯೋಗ 1 ಲಕ್ಷ 40 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. 12 ಕೋಟಿ 79 ಲಕ್ಷ ರೂ. ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯೋದು ಬಾಕಿ ಇದೆ.

ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಇಂದು ಮತದಾನ:

ಮಹಾರಾಷ್ಟ್ರ – 17 ರಾಜಸ್ಥಾನ – 13

ಉತ್ತರ ಪ್ರದೇಶ – 13              ಪಶ್ಚಿಮ ಬಂಗಾಳ – 08

ಮಧ್ಯಪ್ರದೇಶ – 06 ಒಡಿಶಾ – 06

ಬಿಹಾರ – 05           ಜಾರ್ಖಂಡ್ – 03

ಜಮ್ಮು-ಕಾಶ್ಮೀರ – 01      

RELATED ARTICLES

Related Articles

TRENDING ARTICLES