Friday, May 10, 2024

ಧೋನಿ 2 ಮ್ಯಾಚ್​ಗಳನ್ನು ಆಡೋದು ಡೌಟ್​..! ಕಾರಣ ಏನ್ ಗೊತ್ತಾ?

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಚೆನ್ನೈಸೂಪರ್ ಕಿಂಗ್ಸ್​ನ ನಾಯಕ ಮಹೇಂದ್ರ ಸಿಂಗ್ ಧೋನಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ 2 ಮ್ಯಾಚ್​ಗಳಿಂದ ವಿಶ್ರಾಂತಿ ಪಡೆಯೋ ಸಾಧ್ಯತೆ ಇದೆ. ಬೆನ್ನು ನೋವಿನಿಂದಲೇ ಆಡುತ್ತಿರುವ ಮಾಹಿ ಇಂದು ಮುಂಬೈ ವಿರುದ್ಧದ ಪಂದ್ಯದಲ್ಲಿ ತಮ್ಮ ಸಾರಥ್ಯದ ಚೆನ್ನೈ ಗೆಲುವಿನ ಕೇಕೆ ಹಾಕಿದರೆ, ಮುಂದಿನ ಎರಡು ಮ್ಯಾಚ್​ಗಳಿಂದ ದೂರ ಉಳಿದು ರೆಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಐಪಿಎಲ್​ ಮುಗಿದ ಬಳಿಕ ಮೇ.30ರಿಂದ ಇಂಗ್ಲೆಂಡ್​​ನಲ್ಲಿ ವರ್ಲ್ಡ್​ಕಪ್ ನಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ ಆಟಗಾರರ ವರ್ಕ್​ಲೋಡ್ ಅನ್ನು ಗಮನಿಸುತ್ತಿದೆ. ಧೋನಿ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವುದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಎರಡು ಪಂದ್ಯಗಳಲ್ಲಿ ಧೋನಿ ಕಣಕ್ಕಿಳಿಯುವುದು ಡೌಟು. ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಮ್ಯಾಚ್​ ಬಳಿಕ ಧೋನಿ ತಮ್ಮ ಬೆನ್ನು ನೋವಿನ ಬಗ್ಗೆ ಮಾತಾಡಿದ್ದರು.
ಇನ್ನು ದಕ್ಷಿಣ ಆಫ್ರಿಕಾದ ವೇಗಿ ಡೇಲ್​ಸ್ಟೇನ್ ಐಪಿಎಲ್​ನಲ್ಲಿ ಆಡಿದ್ದು ಕೇವಲ ಎರಡೇ ಎರಡು ಮ್ಯಾಚ್​ಗಳನ್ನು. ಆದರೆ, ಭುಜದ ನೋವಿನ ಸಮಸ್ಯೆಯಿಂದ ಅವರು ಟೂರ್ನಿಯಿಂದಲೇ ಹೊರಗುಳಿಯಬೇಕಾಗಿದೆ. ಇದು ಸೌತ್​ಆಫ್ರಿಕಾಕ್ಕೆ ದೊಡ್ಡ ತಲೆನೋವಾಗಿದೆ. ಐಪಿಎಲ್​ ಮತ್ತು ವರ್ಲ್​​ಕಪ್ ಅಂತ ಬಂದ್ರೆ, ಐಪಿಎಲ್​ಗಿಂತಲೂ ವರ್ಲ್ಡ್​ಕಪ್ ಮುಖ್ಯವಾಗುವುದರಿಂದ ಧೋನಿ ರೆಸ್ಟ್ ಮಾಡಲೇ ಬೇಕಾಗಿರೋದು ಅನಿವಾರ್ಯವೂ ಹೌದು.

RELATED ARTICLES

Related Articles

TRENDING ARTICLES