ಬೆಳಗಾವಿ : ತುಮಕೂರು ಆಡಿಯೋ ಬಗ್ಗೆ ನನಗೇನೂ ಗೊತ್ತೇ ಇಲ್ಲ ಅಂತ ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ದರ್ಶನ್ ಹೇಳಿರುವ ಬಗ್ಗೆ ಯಾವುದೇ ದಾಖಲೆಗಳೂ ಇಲ್ಲ. ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಆತ ನನ್ನ ಜೊತೆಗಿದ್ದ. ದರ್ಶನ್ ಹೇಳಿಕೆ ನೀಡಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಲಿ ಎಂದರು, ಮುದ್ದಹನುಮೇಗೌಡರು ಹಣ ಪಡೆದಿಲ್ಲ, ಅವರು ನಿಷ್ಠಾವಂತ ಕಾಂಗ್ರೆಸ್ಸಿಗ ಅಂತ ಸಂಸದ ಮುದ್ದಹನುಮೇಗೌಡರನ್ನೂ ಸಮರ್ಥನೆ ಮಾಡಿಕೊಂಡಿಕೊಂಡಿದ್ದಾರೆ.
ತುಮಕೂರು ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸಂಚಾಲಕ ದರ್ಶನ್ ಕಾರ್ಯಕರ್ತರೊಬ್ಬರೊಡನೆ ನಡೆಸಿದ್ದ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಸಂಸದ ಮುದ್ದಹುನುಮೇಗೌಡರು ಮತ್ತು ಮಾಜಿ ಶಾಸಕ ಕೆ.ಎನ್ ರಾಜಣ್ಣ ನಾಮಪತ್ರ ವಾಪಸ್ಸು ಪಡೆಯಲು ಹಣ ಪಡೆದಿದ್ದಾರೆ ಅನ್ನೋ ಆರೋಪಿಸಿದ್ದರು.
ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ..! ದೊಡ್ಡಗೌಡರು ಕೋಟಿ ಕೋಟಿ ಕೊಟ್ಟಿದ್ದು ಯಾರಿಗೆ?
ಕುಮಾರಸ್ವಾಮಿ ‘ಕೈ’ ತಪ್ಪುತ್ತಾ ಮುಖ್ಯಮಂತ್ರಿ ಸ್ಥಾನ?