Friday, January 3, 2025

ಸಹೋದರನ ವಿರುದ್ದ ಸಿಡಿದೆದ್ದ ರೆಬೆಲ್​ ಶಾಸಕ..!

ಬೆಳಗಾವಿ : ಸಹೋದರ ಸತೀಶ್​​ ಜಾರಕಿಹೊಳಿ ವಿರುದ್ಧ ಅವರ ಸಹೋದರ, ಶಾಸಕ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ. ಸಹೋದರ ಸತೀಶ್ ಜಾರಕಿಹೊಳಿಯನ್ನು ರಮೇಶ್ ಜಾರಕಿಹೊಳಿ ಗೋಮುಖ ವ್ಯಾಘ್ರ ಅಂತ ಕರೆದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ಸಚಿವನಾಗಿ ಆರಾಮಾಗಿದ್ದೆ, ನನ್ನನ್ನು ಪ್ರಚೋದಿಸಿದ್ದು, ಬಂಡಾಯ ಏಳುವಂತೆ ಮಾಡಿದ್ದೇ ಸತೀಶ್ ಜಾರಕಿಹೊಳಿ. ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪ್ರಚೋದನೆ ಕೊಟ್ಟರು. ರಾಜಕೀಯ ಭವಿಷ್ಯದಿಂದ ಪ್ರಚೋದನೆ ಮಾಡಿದ್ರು ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES