Friday, January 3, 2025

ಬಿಲ್ಡಿಂಗ್ ಸಜ್ಜಾ ಕಳಚಿ ಬಿದ್ದು 30 ಮಂದಿಗೆ ಗಾಯ

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್​ನ ಉಜ್ಜನಿ ಗ್ರಾಮದಲ್ಲಿ ಬಿಲ್ಡಿಂಗ್ ಸಜ್ಜಾ ಕಳಚಿ ಬಿದ್ದು ಅಗ್ನಿಕುಂಡದ ಜಾತ್ರೆಗೆ ಬಂದ 30 ಮಂದಿ ಗಾಯಗೊಂಡಿದ್ದಾರೆ.

ಚೌಡೇಶ್ವರಿ ದೇವಿ ಅಗ್ನಿಕುಂಡ ವೀಕ್ಷಿಸಲು ಸಾವಿರಾರು ಮಂದಿ ಭಕ್ತರು ಕಿಕ್ಕಿರಿದು ಜಮಾಯಿಸಿದ್ದರು. ದೇಶದ ಅತೀ ದೊಡ್ಡ ಅಗ್ನಿಕೊಂಡ  ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕೊಂಡ ನೋಡಲು ದೇವಸ್ಥಾನ ದ ಅಕ್ಕ ಪಕ್ಕದ ಬಿಲ್ಡಿಂಗಳ  ಮೇಲೆ ಭಕ್ತರು ಜಮಾಯಿಸಿದ್ದರು. ಇಂದು ಬೆಳ್ಳಗಿನ ಜಾವ ಅವಘಡ ನಡೆದಿದೆ. ಹಳೆಯ ಬಿಲ್ಡಿಂಗ್ ಅಗಿದ್ದರಿಂದ  ಜನರ ಭಾರ ಹೆಚ್ಚಾಗಿ ಸಜ್ಜ ಕಳಚಿ ಬಿದ್ದಿದೆ. ಸಜ್ಜ ಮೇಲೆ ನಿಂತ್ತಿದ್ದ ಹಾಗೂ ಸಜ್ಜ ಕೆಳಗೆ ನಿಂತ್ತಿದ್ದವರಿಗೆ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ತ್ರೀವ್ರವಾಗಿ ಗಾಯಗೊಂಡವರನ್ನು ಮಂಡ್ಯ ಹಾಗೂ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗೊಂಡ ರಕ್ಷಿತ, ರಂಜಿತ, ದಾಸಪ್ಪ, ನಾಗೇಶ್ ಕುಮಾರ್, ನಿಖಿಲ್,  ಬೋರಯ್ಯ, ಹಾಗೂ ಲಕ್ಷ್ಮಮ್ಮ ಗೆ ಕುಣಿಗಲ್  ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

RELATED ARTICLES

Related Articles

TRENDING ARTICLES