Monday, December 23, 2024

ಶತಾಯುಷಿ ಅಜ್ಜಿಯಿಂದ ಮತದಾನ..!

ವಿಜಯಪುರ: ಶತಾಯುಷಿ ಅಜ್ಜಿ ಬೆಳಗ್ಗೆಯೇ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತಚಲಾಯಿಸಲು ಕಾಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಮನೆಯಲ್ಲೇ ಇದ್ದರೂ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಮೈಗಳ್ಳತನ ತೋರಿಸುವವರು ಶತಾಯುಷಿ ಅಜ್ಜಿಯ ಉತ್ಸಾಹವನ್ನು ನೋಡಬೇಕು.

ಕಿವಿ ಕೇಳುವುದಿಲ್ಲ, ಕಣ್ಣು ಕಾಣದಿದ್ದರೂ ಇಳಿ ವಯಸ್ಸಿನಲ್ಲೂ ಗಂಗವ್ವ ಬಳಗಲಿ ಎಂಬ ಅಜ್ಜಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸಿದ್ಧರಾಗಿದ್ದಾರೆ. ವಿಜಯಪುರ ನಗರದಲ್ಲಿರುವ ಮತಗಟ್ಟೆ ಸಂಖ್ಯೆ 168ಕ್ಕೆ ತಲುಪಿದ ಅಜ್ಜಿ ಅಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಮೂಲಕ ಮತದಾನಕ್ಕೆ ಆಗಮಿಸಿ ಇತರರಿಗೂ ಮಾದರಿಯಾಗಿದ್ದಾರೆ.

RELATED ARTICLES

Related Articles

TRENDING ARTICLES