ಬೆಂಗಳೂರು: ಉತ್ತರದಲ್ಲಿ ರಾಜಕೀಯ ಕಣ ರಂಗೇರಿದ್ದು, ಬಹಿರಂಗ ಪ್ರಚಾರಕ್ಕೆ ಈಗಾಗಲೇ ಅಂತಿಮ ತೆರೆ ಬಿದ್ದಾಗಿದೆ. ಇಂದು ಘಟಾನುಘಟಿ ನಾಯಕರು ಮನೆ ಮನೆ ಪ್ರಚಾರ ಕಾರ್ಯ ನಡೆಸಲಿದ್ದು, ಗದ್ದುಗೆ ಗೆಲ್ಲಲು ಲೀಡರ್‌ಗಳು ಕೊನೆಯ ಕಸರತ್ತು ನಡೆಸಲಿದ್ದಾರೆ.
ನಾಳೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆಯಾಗಲಿದೆ. ಹಣ, ಹೆಂಡಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನೆರೆಡು ದಿನ ಮದ್ಯ ಮಾರಾಟಕ್ಕೂ ಫುಲ್ ಬ್ರೇಕ್ ಬೀಳಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಮತದಾನ ನಡೆಯಲಿದೆ.