ಗ್ರೌಂಡ್ರಿಪೋರ್ಟ್ 27 : ಬಳ್ಳಾರಿ ಲೋಕಸಭಾ ಕ್ಷೇತ್ರ
ಬಳ್ಳಾರಿ : ಕಾಂಗ್ರೆಸ್ನ ವಿ.ಎಸ್ ಉಗ್ರಪ್ಪ ಹಾಗೂ ಬಿಜೆಪಿಯ ವೈ.ದೇವೇಂದ್ರಪ್ಪ ಅವರ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿರುವುದು ಬಳ್ಳಾರಿ ರಣಕಣ..! ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್ ಶಾಸಕರು, 2 ಕಡೆಗಳಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ.
ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಹಡಗಲಿ ಕಾಂಗ್ರೆಸ್ ಪಿ.ಟಿ ಪರಮೇಶ್ವರ ನಾಯ್ಡು
ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಎಲ್.ಬಿ.ಪಿ ಭೀಮಾನಾಯ್ಕ
ವಿಜಯನಗರ ಕಾಂಗ್ರೆಸ್ ಆನಂದ್ ಸಿಂಗ್
ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಬಿ. ನಾಗೇಂದ್ರ
ಸಂಡೂರು ಕಾಂಗ್ರೆಸ್ ಈ ತುಕಾರಾಂ
ಕಂಪ್ಲಿ ಕಾಂಗ್ರೆಸ್ ಜೆ.ಎನ್ ಗಣೇಶ್
ಬಳ್ಳಾರಿ ನಗರ ಬಿಜೆಪಿ ಜಿ.ಸೋಮಶೇಖರ ರೆಡ್ಡಿ
ಕೂಡ್ಲಿಗಿ ಬಿಜೆಪಿ ಎಸ್.ವೈ ಗೋಪಾಲಕೃಷ್ಣ
ಲೋಕ ಇತಿಹಾಸ
1951/57/62 : ಟಿ ಸುಬ್ರಮಣ್ಯಂ ಕಾಂಗ್ರೆಸ್
1967/71 : ವರದರಾಜು -ಕಾಂಗ್ರೆಸ್
1977 : ವೀರ ಭದ್ರಪ್ಪ, ಕಾಂಗ್ರೆಸ್,
1980 : ಆರ್ ವೈ ಘೋರ್ಪಡೆ, ಕಾಂಗ್ರೆಸ್
1984/89/91: ಬಸವರಾಜೇಶ್ವರಿ , ಕಾಂಗ್ರೆಸ್
1996/98 : ಕೆ.ಸಿ ಕೊಂಡಯ್ಯ, ಕಾಂಗ್ರೆಸ್
1999 : ಸೋನಿಯಾ ಗಾಂಧಿ, ಕಾಂಗ್ರೆಸ್,
2000 : ಕೋಲೂರು ಬಸವನಗೌಡ .ಕಾಂಗ್ರೆಸ್
2004 : ಕರುಣಾಕರ ರೆಡ್ಡಿ, ಬಿಜೆಪಿ
2009 : ಜೆ ಶಾಂತಾ, ಬಿಜೆಪಿ
2014 : ಬಿ.ಶ್ರೀರಾಮುಲು, ಬಿಜೆಪಿ
2018 : ವಿಎಸ್ ಉಗ್ರಪ್ಪ ,ಕಾಂಗ್ರೆಸ್ (ಉಪಚುನಾವಣೆ)
ಲೋಕ ಸಮರ – 2014
————————————
ಶ್ರೀರಾಮುಲು – ಬಿಜೆಪಿ – 5,34,406
ಎನ್.ವೈ ಹನುಮಂತಪ್ಪ -ಕಾಂಗ್ರೆಸ್ – 4,49,262
ಅಂತರ – 85,144
ರವಿನಾಯಕ್ ಜೆಡಿಎಸ್ 12,613
ಉಪ ಸಮರ – 2018
ವಿ.ಎಸ್. ಉಗ್ರಪ್ಪ ಕಾಂಗ್ರೆಸ್ 6,28,365
ಜೆ.ಶಾಂತಾ ಬಿಜೆಪಿ 3,85,204
ಅಂತರ 2,43,161
ಮತ ಗಣಿತ
ಪುರುಷರು 8,71,191
ಮಹಿಳೆಯರು 8,80,488
ಇತರೆ 232
ಒಟ್ಟು 17,51,911
ಜಾತಿ ಗಣಿತ
ಪರಿಶಿಷ್ಟ ಜಾತಿ 3,50,000
ಪರಿಶಿಷ್ಟ ಪಂಗಡ 3,20,000
ವೀರಶೈವ ಲಿಂಗಾಯತ 3,40,000
ಕುರುಬರು 1,90,000
ಮುಸ್ಲಿಂ 1,95,000
ಇತರೆ 3,56,000
ಅಭ್ಯರ್ಥಿಗಳ ಬಲಾಬಲ
ವಿ.ಎಸ್. ಉಗ್ರಪ್ಪ ಅವರಿಗೆ ಪೂರಕ ಅಂಶಗಳೇನು?
ಉತ್ತಮ ಸಂಸದೀಯ ಪಟು, ರಾಜಕೀಯ ಅನುಭವ
ಉಪಚುನಾವಣೆಯಲ್ಲಿ 2.43 ಲಕ್ಷ ಮತಗಳ ಅಂತರದ ಗೆಲವು
ಡಿಕೆಶಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವುದು
ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳಲ್ಲಿ 6 ಕಾಂಗ್ರೆಸ್ ತೆಕ್ಕೆಯಲ್ಲಿರುವುದು
ಕಾಂಗ್ರೆಸ್ನ ಪಾರಂಪರಿಕ ಮತ ಬ್ಯಾಂಕ್
ವಿ.ಎಸ್. ಉಗ್ರಪ್ಪ ಅವರಿಗಿರೋ ಆತಂಕಗಳು
ಹೊರಗಿನ ಅಭ್ಯರ್ಥಿ
ಡಿಕೆಶಿ ಉಸ್ತುವಾರಿಗೆ ಸ್ಥಳೀಯ ಮುಖಂಡರ ಅಸಮಾಧಾನ
ಬೂದಿ ಮುಚ್ಚಿದ ಕೆಂಡದಂತಿರುವ ಸಚಿವ ಸ್ಥಾನ ವಂಚಿತ ಶಾಸಕರ ಬೇಸರ
ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಬಲ ಕ್ಷೀಣವಾಗಿರುವುದು
ವೈ. ದೇವೇಂದ್ರಪ್ಪ ಅವರಿಗೆ ಪೂರಕ ಅಂಶಗಳೇನು?
ಸರ್ವ ಸಮ್ಮತ ಅಭ್ಯರ್ಥಿಯಾಗಿರುವುದು
ಪ್ರಧಾನಿ ನರೇಂದ್ರ ಮೋದಿ ಅಲೆ, ಶ್ರೀರಾಮುಲು ಬೆಂಬಲ
ಜಾರಕಿಹೊಳಿ ಕುಟುಂಬದ ಬೀಗರಾಗಿರುವುದರಿಂದ ಅನುಕೂಲ ಸಾಧ್ಯತೆ
ಜಿಲ್ಲೆಯ ಹಳೆಯ ಶಾಸಕರ ಸಂಪರ್ಕ
ಕಾಂಗ್ರೆಸ್ ಶಾಸಕರಲ್ಲಿನ ಆಂತರಿಕ ಅಸಮಾಧಾನ
ವೈ. ದೇವೇಂದ್ರಪ್ಪ ಅವರಿಗೆ ಆತಂಕಗಳೇನು?
ರಾಜಕೀಯ ಅನುಭವದ ಕೊರತೆ
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿರುವುದು
ಬಳ್ಳಾರಿ ಜಿ.ಪಂ. ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ರೂ ಕ್ಷೇತ್ರದಲ್ಲಿ ಹೆಚ್ಚು ಪರಿಚಯವಿಲ್ಲ
ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ ಇಬ್ಬರು ಬಿಜೆಪಿ ಶಾಸಕರಿರುವುದು
ಪ್ರಭಾವ ಬೀರುವ ಅಂಶಗಳು
ತುಂಗಭದ್ರಾ ಅಣೆಕಟ್ಟೆಯ ಹೂಳು ತೆರವು ಮಾಡಬೇಕೆಂಬುದು ಜಿಲ್ಲೆಯ ಪ್ರಮುಖ ಬೇಡಿಕೆ
ಕೊಟ್ಟೂರು, ಹರಿಹರ ರೈಲು ಹೊಸಪೇಟೆವರೆಗೆ ಓಡಿಸಬೇಕೆಂದು ಜನರ ಒತ್ತಾಯ
ಗಣಿಬಾಧಿತ ಪ್ರದೇಶಾಭಿವೃದ್ಧಿ ನನೆಗುದಿಗೆ ಬಿದ್ದಿರುವುದು
ಉಕ್ಕಿನ ಕಾರ್ಖಾನೆಗಳ ಸ್ಥಾಪನೆಗಾಗಿ 10 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ರೂ ಕಾರ್ಖಾನೆಗಳು ಆರಂಭವಾಗಿಲ್ಲ
ಗಣಿ ಮತ್ತು ಕೃಷಿ ಕೂಲಿ ಕಾರ್ಮಿಕರ ಆರೋಗ್ಯ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ
ಮರಳು ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಸಮಸ್ಯೆಯೂ ಬಗೆಹರಿದಿಲ್ಲ
ತುಂಗಭದ್ರಾ ನದಿ ಹರಿದರೂ ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣ
ವಿಶ್ವಖ್ಯಾತ ಸಿದ್ಧ ಉಡುಪು ಕೇಂದ್ರಕ್ಕೆ ಸಿಗದ ಮನ್ನಣೆ
ಶಾಶ್ವತವಾದ ವಿಮಾನ ನಿಲ್ದಾಣದ ಬೇಡಿಕೆ ಈಡೇರಿಲ್ಲ
ಪರಿಸರ ಉಳಿಸುವ, ರಸ್ತೆ ಸಂಪರ್ಕ ಸಮರ್ಪಕಗೊಳಿಸುವ ಕಾರ್ಯಕ್ಕೆ ಸಂಸದರು ಕೈ ಹಾಕಿಲ್ಲ
ಸಂಸದ್ದರು ಮಾಡಿದ್ದೇನು? (ಮಾಜಿ ಸಂಸದ ಶ್ರೀರಾಮುಲು)
ಅಪರೆಲ್ ಪಾರ್ಕ್ ಯೋಜನೆಗೆ 5 ಸಾವಿರ ಕೋಟಿ ರೂ. ಮಂಜೂರು
ಮುಂಡರಗಿ ಬಳಿ 10 ಸಾವಿರ ಮನೆಗಳ ನಿರ್ಮಾಣ
280 ಎಕರೆ ಪ್ರದೇಶದಲ್ಲಿ 8 ಸಾವಿರ ಮನೆಗಳ ಟೆಂಡರ್
ರಸ್ತೆ ಅಭಿವೃದ್ಧಿ ಕಾರ್ಯಗಳು ಪ್ರಗತಿ
ವಿವಿಧ ಯೋಜನೆಗಳಿಗೆ 32 ಕೋಟಿ ರೂಪಾಯಿ ವೆಚ್ಚ
ಕ್ಷೇತ್ರ ಪರಿಚಯ
——————————-
ವಿಶ್ವ ವಿಖ್ಯಾತ ಹಂಪಿ, ತುಂಗಭದ್ರಾ ಅಣೆಕಟ್ಟು
15ನೇ ಶತಮಾನದಲ್ಲಿ ನಿರ್ಮಿತವಾದ ಪ್ರಸಿದ್ಧ ಶ್ರೀ ಹುಲಿಕುಂಟೇರಾಯ ದೇವಸ್ಥಾನ
ಪಾಳೆಗಾರರ ಗತವೈಭವದ ಸ್ಥಳ ಜರಿಮಲೆ ಗ್ರಾಮ
ಪುರಾಣ ಪ್ರಸಿದ್ಧ ದುರ್ಗಮ್ಮ ದೇವಾಲಯ