Sunday, January 19, 2025

ಮಧು ಪೋಷಕರಿಂದ ಸುದ್ದಿಗೋಷ್ಠಿ

ರಾಯಚೂರು: ಅನುಮಾನಾಸ್ಪದವಾಗಿ ಸಾವಿಗೀಡಾದ ರಾಯಚೂರಿನ ಇಂಜಿನಿಯರಿಂಗ್​​ ವಿದ್ಯಾರ್ಥಿನಿ ಮಧು ಪತ್ತಾರ್​​ ಪೋಷಕರು ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ. ರಾಜ್ಯಾದ್ಯಂತ ಕಿಚ್ಚು ಹತ್ತಿಸಿರುವ ಜಸ್ಟೀಸ್ ಫಾರ್ ಮಧು ಅಭಿಯಾನಕ್ಕೆ ನಟ, ನಟಿಯರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ವೀರ ಸಾವರ್ಕರ್ ಯೂತ್ ಅಸೋಸಿಯೇಶನ್​ ವತಿಯಿಂದ ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು. ರಾಜ್ಯಾದ್ಯಂತ ಮಧು ಸಾವಿಗೆ ನ್ಯಾಯಕ್ಕಾಗಿ ಹೋರಾಟದ ಕಾವು ಹೆಚ್ಚಿದೆ. ಬೆಳಗ್ಗೆ 11ಗಂಟೆಗೆ ಮಧು ಪತ್ತಾರ್​ ಪೋಷಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಎಪ್ರಿಲ್ 13ರಂದು ಕಾಣೆಯಾಗಿದ್ದ ರಾಯಚೂರಿನ ಐಡಿಎಸ್‌ಎಂಟಿ ಬಡಾವಣೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್‌ ಏಪ್ರಿಲ್‌.15ರಂದು ಕಾಲೇಜಿನಿಂದ 4 ಕಿಲೋ ಮೀಟರ್ ದೂರದ ಅಜ್ಞಾತ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶವದ ಪಕ್ಕದಲ್ಲಿಯೇ ಡೆತ್​ ನೋಟ್ ಸಿಕ್ಕಿದ್ದು, ಅದನ್ನು ಆಧರಿಸಿ ಪೊಲೀಸರು ಆತ್ಮಹತ್ಯೆ ಕೇಸು ದಾಖಲಿಸಿಕೊಂಡಿದ್ದಾರೆ. ಮಧು ಪತ್ತಾರ್‌ ಶವದ ಮೇಲಾದ ಗಾಯಗಳು ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕಿತ್ತು. ಪೋಷಕರ ದೂರಿನನ್ವಯ ಪೊಲೀಸರು ಅತ್ಯಾಚಾರ ಹಾಗೂ ಕೊಲೆ ಕೇಸ್‌ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES