Saturday, November 2, 2024

ಅಂಬಿ ಅಭಿಮಾನಿಗಳಿಗೆ ಸುಮಲತಾ ಬರೆದ ಪತ್ರದಲ್ಲೇನಿದೆ..?

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಅಂಬರೀಶ್ ಅಭಿಮಾನಿಗಳಿಗೆ ಫೇಸ್​ಬುಕ್​ನಲ್ಲಿ ಭಾವುಕ ಪತ್ರ ಬರೆದಿದ್ದಾರೆ. ನಿನ್ನೆಯಷ್ಟೇ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ನಡೆದಿದ್ದು, ಅಂಬರೀಶ್ ಅಭಿಮಾನಿಗಳಿಗೆ ಪತ್ರದ ಮೂಲಕ ಸುಮಲತಾ ಕೃತಜ್ಞತೆ ಸಲ್ಲಿಸಿದ್ದಾರೆ.

ಫೇಸ್​​ಬುಕ್ ಪೋಸ್ಟ್​ ಮೂಲಕ ಧನ್ಯವಾದ ತಿಳಿಸಿದ ಸುಮಲತಾ, “ಅಂಬರೀಶ್ ಅಭಿಮಾನಿಗಳು ಮನೆಯ ಸದಸ್ಯರು. ಅವರಿಗೆ ಯಾವ ರೂಪದಲ್ಲಿ ಕೃತಜ್ಞತೆ ಸಲ್ಲಿಸಲಿ, ರಾಜ್ಯದ ಮೂಲೆಮೂಲೆಗಳಿಂದ ನನ್ನ ನಡೆ ಮೆಚ್ಚಿ ಹುರಿದುಂಬಿಸಿದ್ದಾರೆ. ಅಮ್ಮನನ್ನು ಗೆಲ್ಲಿಸಿ, ಅಕ್ಕನನ್ನು ಗೆಲ್ಲಿಸಿ, ಅತ್ತಿಗೆಯನ್ನು ಗೆಲ್ಲಿಸಿ ಎಂದಿದ್ದಾರೆ. ಈ ಪ್ರೀತಿ ಸಂಪಾದನೆ ಅಂಬರೀಶ್ ಆಸ್ತಿ, ಅದನ್ನ ಕಾಪಾಡಿಕೊಳ್ಳುವುದು ನನ್ನ ಧರ್ಮ” ಎಂದು ಫೇಸ್​ಬುಕ್​​ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.

ನಟರಾದ ದರ್ಶನ್​​, ಯಶ್​ರನ್ನು ಕೂಡ ಸುಮಲತಾ ತಮ್ಮ ಬರಹದಲ್ಲಿ ಕೊಂಡಾಡಿದ್ದಾರೆ. “ಅಂಬರೀಶ್ ಶಕ್ತಿ ಜೊತೆಗೆ ದರ್ಶನ್​, ಯಶ್ ಶಕ್ತಿ ಕೂಡ ಒಟ್ಟಾಗಿದೆ. ಈಗ ಪ್ರತಿಯೊಬ್ಬರೂ ನಮ್ಮ ಮನೆಯ ಸದಸ್ಯರೇ, ಅಲ್ಲಿ ಭೇದಭಾವಗಳಿಲ್ಲ” ಎಂದು ಎಲ್ಲರಿಗೂ ವಿಶೇಷವಾದ ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES