Thursday, November 7, 2024

ಡಿಕೆಶಿ ಸಿಎಂ ಆದಾಗ ಎಲ್ಲದಕ್ಕೂ ಉತ್ತರಿಸ್ತಾರಂತೆ..!

ಶಿವಮೊಗ್ಗ: ನಾನು ಇನ್ನೂ ಚೀಫ್ ಮಿನಿಸ್ಟರ್ ಆಗಿಲ್ಲ. ಚೀಫ್ ಮಿನಿಸ್ಟರ್ ಆಗೋದಕ್ಕೆ ನನಗೆ ಇನ್ನೂ ಟೈಮ್ ಇದೆ. ಚೀಫ್ ಮಿನಿಸ್ಟರ್ ಆದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಸಚಿವ ಡಿ. ಕೆ. ಶಿವಕುಮಾರ್​ ಹೆಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೇರಿದ ಡೈರಿ ಕಾಪಿ ನನ್ನಲ್ಲಿದ್ದಿದ್ದು ನಿಜ, ಅದನ್ನು ಐಟಿಯವರು ತೆಗೆದುಕೊಂಡು ಹೋಗಿದ್ದಾರೆ. ಈ ವಿಚಾರ ಕೋರ್ಟ್​ನಲ್ಲಿ ಇರೋದ್ರಿಂದ ಎಲ್ಲವನ್ನೂ ಹೇಳೋಕಾಗಲ್ಲ. ನಮ್ಮ ಹತ್ತಿರ ಯಾರ್ ಯಾರದ್ದೋ ಸೀಕ್ರೆಟ್ ಇರ್ತಾವೆ. ಎಲ್ಲವನ್ನು ಹೇಳೋಕಾಗಲ್ಲ. ಐಟಿ ಅಧಿಕಾರಿಗಳಿಗೆ ಎಲ್ಲಾ ವಿಚಾರ ಹೇಳಿ ಮುಜುಗರಕ್ಕೀಡು ಮಾಡಲು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.

“ನಾವು ಸಾರ್ವಜನಿಕ ಜೀವನದಲ್ಲಿ ಇರುವವರು. ಬಹಳ ಜನರ ಸೀಕ್ರೆಟ್ಸ್ ನನಗೆ ಗೊತ್ತಿರುತ್ತೆ. ಯಡಿಯೂರಪ್ಪ ನನ್ನ ಮನೆಗೆ ಬಂದಿದ್ದ ವಿಚಾರವಾಗಿ ಎಲ್ಲ ಸೀಕ್ರೆಟ್ ಗಳನ್ನು ಹೇಳೋದಕ್ಕೆ ಆಗೋದಿಲ್ಲ. ಯಡಿಯೂರಪ್ಪ ಆಪರೇಷನ್ ಆಡಿಯೋ ಬಾಂಬ್ ವಿಚಾರ. ಎಸ್​​ಐಟಿ ರಚನೆ ಬಗ್ಗೆ ಸಿಎಂ ಹತ್ತಿರ ಕೇಳಿ” ಎಂದಿದ್ದಾರೆ. 

RELATED ARTICLES

Related Articles

TRENDING ARTICLES