ಮಂಡ್ಯ : ಮತದಾನ ಮಾಡಿದ ಫೋಟೋವನ್ನು, ವಿಡಿಯೋವನ್ನು ಮಾಡುವುದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದು ಅಪರಾಧ ಅನ್ನೋ ಅರಿವು ಎಷ್ಟೋ ಜನರಿಗೆ ಇಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಗುಜ್ಜನಡುನಲ್ಲಿ (ತುಮಕೂರು ಜಿಲ್ಲೆ ಪಾವಗಡ ತಾಲೂಕು) ತಾಪಂ ಸದಸ್ಯ ಹನುಮಂತರಾಜು ತಾವು ಕಾಂಗ್ರೆಸ್ಗೆ ವೋಟ್ ವಿಡಿಯೋ ಹರಿಬಿಟ್ಟಿದ್ದರು.
ಇಂತಹದ್ದೇ ಒಂದು ಘಟನೆ ಮಂಡ್ಯದಲ್ಲಿ ನಡೆದಿದೆ. ನಾಗಮಂಗಲದ ವಾರ್ಡ್ ನಂ.19ರ ನಿವಾಸಿ ರಮೇಶ್ ಎನ್ನುವ ಮತದಾರ ತಾನು ಸುಮಲತಾ ಅವರಿಗೆ ಮತಹಾಕಿರುವ ಫೋಟೋವನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ್ದಾರೆ.
ಸುಮಲತಾಗೆ ಮತ ಹಾಕಿ ಫೋಟೋ ಅಪ್ಲೋಡ್ ಮಾಡಿದ ಮತದಾರ..!
TRENDING ARTICLES