Wednesday, November 13, 2024

ಅಂಬಿ ಹುಟ್ಟೂರಿನಲ್ಲಿ ಶತಾಯುಷಿಯಿಂದ ಮತದಾನ

ಮಂಡ್ಯ : ರಾಜ್ಯದ 14 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ದೇಶದ 95 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ರಾಷ್ಟ್ರದ 2ನೇ ಹಂತದ ಹಾಗೂ ರಾಜ್ಯದಲ್ಲಿ ಮೊದಲ ಹಂತದ ಮತದಾನ ಇದಾಗಿದೆ. ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರದಲ್ಲೂ ಇಂದೇ ಮತದಾನ ನಡೆಯುತ್ತಿದೆ. ಅಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವೆ ಸ್ಪರ್ಧೆಯಿದೆ.
ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಶತಾಯುಷಿಯೊಬ್ಬರು ವೋಟ್ ಮಾಡಿದ್ದಾರೆ. ವೋಟ್ ಮಾಡಿ ಗಮನಸೆಳೆಯುವ ಜೊತೆಗೆ ಮತದಾನದ ಜಾಗೃತಿ ಮೂಡಿಸಿದ ಅಜ್ಜಿಯ ಹೆಸರು ಚಿಕ್ಕಮಾಯಮ್ಮ ಅಂತ. ಮತದಾನದ ಬಗ್ಗೆ ನಿರ್ಲಕ್ಷ್ಯ ತೋರುವವರು ಇಳಿಯವಯಸ್ಸಿನಲ್ಲೂ ಮತಗಟ್ಟೆಗೆ ಬಂದು ವೋಟ್ ಮಾಡಿ ಹೋಗುವವರನ್ನು ನೋಡಿ  ಮತದಾನದ ಪ್ರಾಮುಖ್ಯತೆ ಅರಿತು, ಮತಚಲಾಯಿಸಬೇಕು.  

RELATED ARTICLES

Related Articles

TRENDING ARTICLES