ಕೋಲಾರ : ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಮತದಾನದ ಸಂಭ್ರಮ. ರಾಜ್ಯದ 14 ಲೋಕಸಭಾ ಕ್ಷೇತ್ರಗಳು ಒಳಗೊಂಡಂತೆ ಒಟ್ಟು 95 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಇಂದು ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಕೋಲಾರ ‘ಲೋಕ’ ಕಣವೂ ಒಂದು. ಇಲ್ಲಿ ಹಾಲಿ ಸಂಸದ ಕೆ.ಹೆಚ್ ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿ. ಇವರ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಮುನಿಸ್ವಾಮಿ.
ಈ ಕ್ಷೇತ್ರದಲ್ಲೀಗ ಕುರುಡು ಕಾಂಚಾಣ ಕುಣಿದಾಡಿದೆ. ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ 10 ಲಕ್ಷ ರೂ ಗರಿಗರಿ ನೋಟು ಸಿಕ್ಕಿದೆ. ‘ಕೈ’ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಸಂಬಂಧಿ ಕುಮಾರ್ ಮನೆಯಲ್ಲಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿದೆ. ಮತದಾರರಿಗೆ ಹಂಚಲು ಹಣ ದಾಸ್ತಾನು ಮಾಡಿರುವ ಶಂಕೆ ವ್ಯಕ್ತವಾಗಿದೆ.
‘ಕೈ’ ಅಭ್ಯರ್ಥಿ ಸಂಬಂಧಿ ಮನೆಯಲ್ಲಿದ್ದ ಹಣ ವಶ..!
TRENDING ARTICLES