Friday, September 13, 2024

ಮತ ಹಾಕಲು ಬಂದ ಮೊದಲ ಪ್ರಜೆಗೆ ಆರತಿ ಬೆಳಗಿ ಸ್ವಾಗತ..!

ಮೈಸೂರು : ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 11 ರಾಜ್ಯ 1 ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 95 ಕ್ಷೇತ್ರಗಳಲ್ಲಿ ಮತದಾನದ ಸಂಭ್ರಮ, ರಾಜ್ಯದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್​, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿಂದು ಮತದಾನದ ಸಂಭ್ರಮ.
ಮೈಸೂರಿನಲ್ಲಿ ಮತ ಹಾಕಲು ಬಂದ ಮೊದಲ ಪ್ರಜೆಗೆ ಭವ್ಯ ಸ್ವಾಗತ ಕೋರಲಾಗಿದೆ. ಮೈಸೂರಿನ ಮಹರ್ಷಿ ವಿದ್ಯಾಸಂಸ್ಥೆಯಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದ್ದು, ಮೊದಲು ಮತಹಾಕಲು ಬಂದ ವ್ಯಕ್ತಿಗೆ ಆರತಿ ಬೆಳಗಿ, ಹೂವಿನಹಾರ ಹಾಕಿ ಸಂಭ್ರಮದಿಂದ ಸ್ವಾಗತ ಕೋರಲಾಗಿದೆ. ಈ ವಿಶೇಷ ಕ್ಷಣದ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.

RELATED ARTICLES

Related Articles

TRENDING ARTICLES