Friday, July 19, 2024

‘ಲೋಕ’ ಸಮರಕ್ಕೆ ಕರ್ನಾಟಕ ಸಿದ್ಧ, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ

ಬೆಂಗಳೂರು : ದೇಶದಲ್ಲಿ 2ನೇ ಹಂತದ ಹಾಗೂ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್​, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿಂದು ಮತದಾನದ ಸಂಭ್ರಮ.
ಉಳಿದ 14 ಕ್ಷೇತ್ರಗಳಾದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಬೀದರ್​, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಏ. 23ರಂದು ಮತದಾನ ನಡೆಯುತ್ತದೆ.
ಇನ್ನು ರಾಜ್ಯದ 14 ಕ್ಷೇತ್ರ ಮಾತ್ರವಲ್ಲದೆ ತಮಿಳುನಾಡಿನ 38, ಮಹಾರಾಷ್ಟ್ರದ 10, ಉತ್ತರಪ್ರದೇಶದ 8, ಅಸ್ಸಾಂನ 5, ಬಿಹಾರದ 5, ಒಡಿಶಾದ 5, ಚಂಡೀಗಢದ 3, ಪಶ್ಚಿಮ ಬಂಗಾಳದ 3, ಜಮ್ಮು-ಕಾಶ್ಮೀರದ 2, ಮಣಿಪುರದ 1 ಕೇಂದ್ರಾಡಳಿತ ಪ್ರದೇಶ ಪುದಿಚೇರಿಯ 1 ಕ್ಷೇತ್ರಗಳು ಸೇರಿದಂತೆ 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

RELATED ARTICLES

Related Articles

TRENDING ARTICLES