ಮಂಡ್ಯ : ಮತ ಸಂಭ್ರಮ ಜೋರಾಗಿದೆ. ಮತದಾನದ ಹಕ್ಕನ್ನು ಚಲಾಯಿಸಿ ತಮ್ಮ ಜನಪ್ರತಿನಿಧಿಯನ್ನು ಆಯ್ಕೆಮಾಡಿ ಪಾರ್ಲಿಮೆಂಟ್ಗೆ ಕಳುಹಿಸುವಲ್ಲಿ ಮತದಾರರು ಉತ್ಸುಕರಾಗಿದ್ದಾರೆ. ಅಂತೆಯೇ ಅಯ್ಯಪ್ಪ ಮಾಲಾಧಾರಿಗಳು ತಮ್ಮ ಮತವನ್ನು ಹಾಕಿ ಶಬರಿಮಲೆಯತ್ತ ಹೊರಟಿದ್ದಾರೆ.
ಮಂಡ್ಯದ ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಶಬರಿಮಲೆ ಯಾತ್ರೆಗೆ ಹೊರಟ ಮಾಲಾಧಾರಿಗಳು ಮತಚಲಾಯಿಸಿದ್ದಾರೆ. ಸುಮಾರು 50 ಮಂದಿ ಮಾಲಾಧಾರಿಗಳು ಹಕ್ಕು ಚಲಾಯಿಸಿ ಯಾತ್ರೆ ಕೈಗೊಂಡಿದ್ದಾರೆ. 9 ದಿನಗಳಿಂದ ವ್ರತ ಮಾಡುತ್ತಿರುವ ಈ ಮಾಲಾಧಾರಿಗಳು 6 ದಿನಗಳ ಯಾತ್ರೆ ಹೊರಟಿದ್ದಾರೆ.
ಶಬರಿಮಲೆಗೆ ಹೊರಡೋ ಮುನ್ನ ಮತದಾನ ಮಾಡಿದ ಮಾಲಾಧಾರಿಗಳು
TRENDING ARTICLES