Wednesday, November 6, 2024

ರಾಜ್ಯದ ಹಲವೆಡೆ ಮತದಾನ ಬಹಿಷ್ಕಾರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಕಾಗಾನಪಲ್ಲಿ ಗ್ರಾಮದ ಮತಗಟ್ಟೆ 120ರಲ್ಲಿ‌ ಮತದಾನ ಬಹಿಷ್ಕಾರ ಮಾಡಲಾಗಿದೆ. ಏಳು ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿ ಒಂದು ಗಂಟೆ ಕಳೆದರೂ ಯಾರೊಬ್ಬ ಮತದಾರರೂ ಮತಗಟ್ಟೆಯತ್ತ ಬಂದಿಲ್ಲ.

ಸಿದ್ದನಪಲ್ಲಿ, ಮೈನಗಾನಪಲ್ಲಿ ತಾಂಡಾ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದು, ಯಾರೂ ಮತ ಚಲಾಯಿಸಿಲ್ಲ. ಗ್ರಾಮಗಳಿಗೆ ರಸ್ತೆ, ಮೂಲಸೌಲಭ್ಯಗಳ ಕೊರತೆ ಇದ್ದು, ಇದ್ಯಾವ ಸಮಸ್ಯೆಯನ್ನೂ ಬಗೆಹರಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. 1 ಗಂಟೆ ಕಳೆದರೂ ಮತದಾನ ಮಾಡಲು ಬಾರದ ಗ್ರಾಮಸ್ಥರು ಜಿಲ್ಲಾಧಿಕಾರಿ ಅನಿರುದ್ಧ್​​ ಶ್ರವಣ್ ಗ್ರಾಮಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದ್ದಾರೆ.

ಕೋಲಾರ ಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಕೆಸಿ ವ್ಯಾಲಿ ಯೋಜನೆಯ ನೀರು ಗ್ರಾಮಕ್ಕೆ ಬಿಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಮಲ್ಲಸಂದ್ರ ಗ್ರಾಮಸ್ಥರು ಮತದಾನಕ್ಕೆ ಸಾಮೂಹಿಕ ಬಹಿಷ್ಕಾರ ಮಾಡಿದ್ದು, ನೀರಿಗಾಗಿ ಈಗಾಗಲೇ ಹಲವು ಬಾರಿ ಮನವಿಗೆ ಮಾಡಿದ್ದರು. ಆದರೆ ಜನರ ಸಮಸ್ಯೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದ ಕಾರಣ ಮತ ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. 9ಗಂಟೆಯವರೆಗೂ ಗ್ರಾಮಸ್ಥರು ಮತಚಲಾಯಿಸಿಲ್ಲ.

RELATED ARTICLES

Related Articles

TRENDING ARTICLES