ತುಮಕೂರು : ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು EVM ಬಗ್ಗೆ ಮತ್ತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಕ್ಷೇತ್ರ ತುಮಕೂರಿನ ಹೆಗ್ಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತನ್ನ ಪತ್ನಿ ಜೊತೆ ತೆರಳಿ ವೋಟ್ ಮಾಡಿದರು.
ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮತಯಂತ್ರ ಇವಿಎಂ ಬಗ್ಗೆ ಈಗಲೂ ಅನುಮಾನವಿದೆ, ಮತ್ತೆ ಅದನ್ನು ಹ್ಯಾಕ್ ಮಾಡೋ ಸಂಶಯವೂ ಇದೆ ಅಂತ ಪರಮೇಶ್ವರ್ ಹೇಳಿದ್ದಾರೆ.