Friday, April 12, 2024

ಮಂಡ್ಯದಲ್ಲಿ ಶುರುವಾಯ್ತಾ ಆಣೆ ಪ್ರಮಾಣದ ಬ್ಲಾಕ್​ಮೇಲ್​..?

ಮಂಡ್ಯ : ಸ್ಟಾರ್​ವಾರ್​ಗೆ ವೇದಿಕೆ ಆಗಿರುವ ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಆಣೆ ಪ್ರಮಾಣದ ರಾಜಕೀಯ, ಬ್ಲಾಕ್​ಮೇಲ್ ತಂತ್ರ ಶುರುವಾಯ್ತಾ ಅನ್ನೋ ಪ್ರಶ್ನೆ ಮೂಡುತ್ತಿದೆ.
ನಿಖಿಲ್​ ಕುಮಾರಸ್ವಾಮಿ ಅವರ ಮಾದರಿ ಬ್ಯಾಲೆಟ್​ ಪೇಪರ್ ಇಟ್ಟು ಮತದಾರರಿಂದ ಆಣೆ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ತಕ್ಕಂತೆ ಫೋಟೋಗಳು ವೈರಲ್ ಆಗುತ್ತಿವೆ. ಕಡೇ ದಿನ ಮತದಾರರನ್ನು ಕಟ್ಟಿಹಾಕಲು ಜೆಡಿಎಸ್​​​​ ಪ್ರಮಾಣದ ಗಿಮಿಕ್ಸ್​​ ಮಾಡುತ್ತಿದೆಯೇ ಅನ್ನೋ ಪ್ರಶ್ನೆ ಮೂಡಿದೆ.

ಮಂಡ್ಯ ರಣಕಣದಲ್ಲಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಮೈತ್ರಿ ಕಲಿಯಾಗಿ ಕಣದಲ್ಲಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ‘ರಣಕಹಳೆ’ ಊದಿದ್ದಾರೆ. 

RELATED ARTICLES

Related Articles

TRENDING ARTICLES