Monday, September 25, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಗ್ರೌಂಡ್​​ರಿಪೋರ್ಟ್​: ‘ಕಮಲ’ ಭದ್ರಕೋಟೆ ಮೇಲೆ ದೋಸ್ತಿ ಕಣ್ಣು!

ಗ್ರೌಂಡ್​​ರಿಪೋರ್ಟ್​: ‘ಕಮಲ’ ಭದ್ರಕೋಟೆ ಮೇಲೆ ದೋಸ್ತಿ ಕಣ್ಣು!

ಗ್ರೌಂಡ್​​ರಿಪೋರ್ಟ್ 25 : ಧಾರವಾಡ ಲೋಕಸಭಾ ಕ್ಷೇತ್ರ

ಧಾರವಾಡ : ಪ್ರತಿಷ್ಠಿತ ಧಾರವಾಡ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆ. ಈ ಕೋಟೆ ಮೇಲೆ ‘ಕೈ’ ಕಣ್ಣಿಟ್ಟಿದೆ. ಹಾಲಿ ಸಂಸದ ಪ್ರಹ್ಲಾದ್​ ಜೋಶಿ ಬಿಜೆಪಿ ಅಭ್ಯರ್ಥಿ. ಇವರಿಗೆ ಪ್ರಬಲ ಪ್ರತಿಸ್ಪರ್ಧಿ ಕಾಂಗ್ರೆಸ್​​ನ ವಿನಯ್​ ಕುಲಕರ್ಣಿ. ಈ ಇಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟವಿದ್ದು ಮತದಾರರು ಯಾರ ಕೈ ಹಿಡಿಯುತ್ತಾರೆ ಅನ್ನೋದನ್ನು ಕಾದುನೋಡಬೇಕು.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರು ಇದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ನವಲಗುಂದ – ಬಿಜೆಪಿ – ಶಂಕರ್ ಪಾಟೀಲ್ ಮುನೇನಕೊಪ್ಪ

ಕುಂದಗೋಳ – ಕಾಂಗ್ರೆಸ್ – ಮದಿವಂಗತ ಸಚಿವ ಸಿ.ಎಸ್. ಶಿವಳ್ಳಿ

ಧಾರವಾಡ ಗ್ರಾಮೀಣ – ಬಿಜೆಪಿ – ಅಮೃತ್ ದೇಸಾಯಿ

ಹುಬ್ಬಳ್ಳಿ-ಧಾರವಾಡ ಪೂರ್ವ – ಕಾಂಗ್ರೆಸ್  – ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿ-ಧಾರವಾಡ ಕೇಂದ್ರ – ಬಿಜೆಪಿ -ಜಗದೀಶ್ ಶೆಟ್ಟರ್

ಹುಬ್ಬಳ್ಳಿ-ಧಾರವಾಡ ಪಶ್ಚಿಮ-  ಬಿಜೆಪಿ – ಅರವಿಂದ್ ಬೆಲ್ಲದ್

ಕಲಘಟಗಿ -ಬಿಜೆಪಿ -ಸಿ.ಎಂ. ನಿಂಬಣ್ಣವರ್

ಶಿಗ್ಗಾಂವಿ – ಬಿಜೆಪಿ- ಬಸವರಾಜ್ ಬೊಮ್ಮಾಯಿ

ಲೋಕ ಇತಿಹಾಸ
ದತ್ತಾತ್ರೇಯ ಪರಶುರಾಮ ಕರಮರ್ಕರ್ (1952/1957 ಕಾಂಗ್ರೆಸ್ ಸರೋಜಿನಿ ಮಹಿಷಿ (1962/ 1967/ 1971/ 1977 ಕಾಂಗ್ರೆಸ್ ) ವಿಜಯ ಸಂಕೇಶ್ವರ (1996/ 1998/ 1999 ಬಿಜೆಪಿ ಪ್ರಹ್ಲಾದ್ ಜೋಷಿ (2004/ ಬಿಜೆಪಿ) (ಧಾರವಾಡ ಉತ್ತರ ಲೋಕಸಭಾ ಕ್ಷೇತ್ರ) ಪ್ರಹ್ಲಾದ್ ಜೋಷಿ (2009/ 2014 ಬಿಜೆಪಿ) (ಧಾರವಾಡ ಲೋಕಸಭಾ ಕ್ಷೇತ್ರ)

ಲೋಕ ಸಮರ-2014
ಪ್ರಹ್ಲಾದ್ ಜೋಶಿ ಬಿಜೆಪಿ 5,45,395

ವಿನಯ್​​ ಕುಲಕರ್ಣಿ ಕಾಂಗ್ರೆಸ್ 4,31,738

ಅಂತರ 1,13,657

‘ಮತ’ ಗಣಿತ
ಪುರುಷರು 8,09,486
ಮಹಿಳೆಯರು 7,69,538
ಒಟ್ಟು 15,79, 024

‘ಜಾತಿ’ ಗಣಿತ

ಲಿಂಗಾಯತ – 5,75,000

ಎಸ್​​ಸಿ, ಎಸ್​​ಟಿ- 2,56,000
ಕುರುಬ- 1,68,000
ಮರಾಠಾ- 1,22,000
ಬ್ರಾಹ್ಮಣ- 96,000
ಮುಸ್ಲಿಂ- 2,55,000
ಕ್ರಿಶ್ಚಿಯನ್- 42,000
ಜೈನ್ -13,000
ಒಕ್ಕಲಿಗ- 8,000
ಈಡಿಗ- 12,000

ಅಭ್ಯರ್ಥಿಗಳ ಬಲಾಬಲ 

ಪ್ರಹ್ಲಾದ್ ಜೋಷಿ ಅವರ ಪೂರಕ ಅಂಶಗಳೇನು?
ಕ್ಲೀನ್ ಇಮೇಜ್, ಸುಲಭವಾಗಿ ಸಿಗುವ ರಾಜಕಾರಣಿ
ಸತತ 15 ವರ್ಷಗಳ ಕಾಲ ಸಂಸದರಾಗಿ ಆಡಳಿತದ ಅನುಭವ
ಕ್ಷೇತ್ರದ ಮತದಾರರ ನಾಡಿಮಿಡಿತ ಅರಿತಿರುವ ಕಮಲ ನಾಯಕ
ಪ್ರಧಾನಿ ನರೇಂದ್ರ ಮೋದಿ ಹವಾ, ತಳಮಟ್ಟದ ಕಾಯಕರ್ತರ ಬಲ
ಕೇಂದ್ರ ಸರಕಾರದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಜಾರಿ
ಪ್ರಧಾನಿ ಮೋದಿ ಪರ ಯುವ ಮತದಾರರ ಒಲವು
ಶೆಟ್ಟರ್, ಯಡಿಯೂರಪ್ಪ, ಬೊಮ್ಮಾಯಿ ಪ್ರಭಾವ
‘ಕೈ’ ಪಾಳಯದಲ್ಲಿರುವ ಆಂತರಿಕ ಕಚ್ಚಾಟದ ಲಾಭ

ಪ್ರಹ್ಲಾದ್ ಜೋಷಿ ಅವರಿಗಿರೋ ಆತಂಕಗಳೇನು?
ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ದಿಟ್ಟ ನಿಲುವು ಇಲ್ಲದಿರುವುದು
ಜೋಷಿ ಪರ ಪಕ್ಷದಲ್ಲಿ ಎದ್ದಿರುವ ಅಸಮಾಧಾನ
ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿಲ್ಲ ಎನ್ನುವ ಕೂಗು
ಇನ್ನಷ್ಟು ಜನಪರ ಕಾರ್ಯಗಳನ್ನು ಕೈಗೆತ್ತಿಕೊಂಡಿಲ್ಲವೆಂಬ ಆರೋಪ
ಲಿಂಗಾಯತ ಸಮುದಾಯ ‘ಕೈ’ ಕೊಡುವ ಸಾಧ್ಯತೆ

ವಿನಯ್​​ ಕುಲಕರ್ಣಿ ಅವರಿಗೆ ಪೂರಕ ಅಂಶಗಳೇನು?
ಪ್ರಬಲ ಲಿಂಗಾಯತ ಮುಖಂಡ, ಪಂಚಮಸಾಲಿ ಪಂಗಡ
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಮಾಡಿದ ಕೆಲಸ
ಮುಸ್ಲಿಂ ಮತದಾರ ಕೈ ಹಿಡಿಯಬಹುದೆನ್ನುವ ಆಶಾವಾದ
ಆಂತರಿಕ ಕಲಹ ಬಿಟ್ಟು ಒಂದಾಗುತ್ತಿರುವ ಕೈ ನಾಯಕರು
ಜೋಶಿ ವಿರುದ್ಧ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ
ಮೈತ್ರಿ ಸರಕಾರ ಆಡಳಿತದಲ್ಲಿ ಇರುವುದರಿಂದ ಅನುಕೂಲ

ವಿನಯ್​​ ಕುಲಕರ್ಣಿ ಅವರಿಗೆ ಆತಂಕಗಳೇನು?
ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವುದು
ದರ್ಪದ ಆಡಳಿತ, ಹಿಂಬಾಲಕರ ಬೆಳೆಸದಿರುವುದು
ಕಾಂಗ್ರೆಸ್ ಪಾಳಯದಲ್ಲಿರುವ ಆಂತರಿಕ ಕಲಹ
ಒಗ್ಗೂಡಿ ಚುನಾವಣೆ ಎದುರಿಸದೇ ಇರುವುದು
ಕ್ಷೇತ್ರದ ಕಡೆಗೆ ತಲೆ ಹಾಕದ ಸಂತೋಷ್ ಲಾಡ್
ಮಹದಾಯಿ ವಿಚಾರದಲ್ಲಿ ವಿಳಂಬ ನೀತಿ ಅನುಸರಣೆ ಆರೋಪ
ಅಲ್ಪಸಂಖ್ಯಾತ ಮುಖಂಡರು ಕೈ ಎತ್ತುವ ಸಾಧ್ಯತೆ

ಪ್ರಭಾವ ಬೀರುವ ಅಂಶಗಳು
ಮಹದಾಯಿ, ಕಳಸಾ ಬಂಡೂರಿ ಯೋಜನೆ
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಹುಬ್ಬಳ್ಳಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ವಿವಾದ
ಪಂಚಮಸಾಲಿ ಜಾತಿ ರಾಜಕಾರಣ ಲೆಕ್ಕಾಚಾರ

ಸಂಸದರು ಮಾಡಿದ್ದೇನು…?
ಹುಬ್ಬಳ್ಳಿ-ಧಾರವಾಡ ಕೇಂದ್ರ ಸ್ಮಾಟ್ ಸಿಟಿ ಯೋಜನೆ ವ್ಯಾಪ್ತಿಗೆ
ಧಾರವಾಡ ನಗರಕ್ಕೆ ಐಐಟಿ ಮಂಜೂರಾತಿ ಮಾಡಿಸಿದ್ದು
ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಏಮ್ಸ್ ತರುವಲ್ಲಿ ಯಶಸ್ವಿ
6 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ, ರಾಜ್ಯ, ನಗರ ರಸ್ತೆಗಳ ಅಭಿವೃದ್ಧಿ
ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ
ಹುಬ್ಬಳ್ಳಿ ರೈಲ್ವೆ ನಿಲ್ದಾಣ ಮತ್ತು ವರ್ಕ್ ಶಾಪ್ ಆಧುನೀಕರಣ
50 ಹಾಸಿಗೆಗಳ ರಾಜ್ಯ ಕಾರ್ಮಿಕ ವಿಮಾ ಸುಸಜ್ಜಿತ ಆಸ್ಪತ್ರೆ
ಕೇಂದ್ರದ ವಿಶೇಷ ಅನುದಾನದಡಿ ವಾಣಿಜ್ಯ ನಗರಿಯ ಅಭಿವೃದ್ಧಿ

ಕ್ಷೇತ್ರ ಪರಿಚಯ
ಸಂಗೀತ-ಸಾಹಿತ್ಯ, ಶಿಕ್ಷಣದ ತವರೂರು
ಕೃಷಿ, ಧಾರವಾಡ ವಿಶ್ವವಿದ್ಯಾಲಯ, ಐಐಟಿಯಿಂದಾಗಿ ಶಿಕ್ಷಣ ಕಾಶಿ ಎಂಬ ಖ್ಯಾತಿ
ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ- ಧಾರವಾಡ
ಹೈಕೋರ್ಟ್ ಸಂಚಾರಿ ಪೀಠ, ನೈರುತ್ಯ ರೈಲ್ವೆ ವಲಯ ನೆಲೆವೂರಿರುವ ಕ್ಷೇತ್ರ
2008ರ ಕ್ಷೇತ್ರ ಪುನರ್ ವಿಂಗಡಣೆಗಿಂತ ಮೊದಲು ಧಾರವಾಡ ಉತ್ತರ
2009 ನಂತರ ಧಾರವಾಡ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಸಾಧನಕೆರೆ ಉದ್ಯಾನವನ
ಬೇಂದ್ರೆ ಮನೆ, ಧಾರವಾಡ ಕೋಟೆ, ವರೂರು ನವಗ್ರಹ ತೀರ್ಥ ಕ್ಷೇತ್ರ
ಅಮರಗೋಳದ 13ನೇ ಶತಮಾನದ ಬನಶಂಕರಿ ದೇವಸ್ಥಾನ
ಹುಬ್ಬಳ್ಳಿಯ ಮೂರುಸಾವಿರ ಮಠ, ಸಿದ್ದಾರೂಢ ಸ್ವಾಮಿ ಮಠ

LEAVE A REPLY

Please enter your comment!
Please enter your name here

Most Popular

Recent Comments