Thursday, December 26, 2024

ವರ್ಜಿನಲ್ ಮಂಡ್ಯ ಗೌಡ ಅಭಿ ಅಂದ್ರು ಯಶ್ ..!

ಮಂಡ್ಯ: ಇಂದು ಮಂಡ್ಯ ರಣಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ‘ಸ್ವಾಭಿಮಾನಿ ಸಮ್ಮಿಲನ’ ಅನ್ನೋ ಹೆಸರಲ್ಲಿ ಕ್ಲೈಮ್ಯಾಕ್ಸ್​ ಬೃಹತ್ ಸಮಾವೇಶ ನಡೆಸಿದರು. ಈ ಸಮಾವೇಶದಲ್ಲಿ ಮಾತನಾಡಿದ ನಟ ರಾಕಿಂಗ್​ ಸ್ಟಾರ್ ಯಶ್ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮಾತೆತ್ತಿದ್ರೆ ಜಾತಿ ಜಾತಿ ಅಂತಾರೆ. ಮಂಡ್ಯದ ವರ್ಜಿನಲ್​ ಗೌಡ ಅಭಿ ಎಂದರು. ಯಶ್ ಮಾತನಾಡುವ ಮುನ್ನ ಮಾತನಾಡಿದ್ದ ಅಭಿಷೇಕ್ ,ನಾನು ಯಾರು? ನನ್​ ಹೆಸರು ಅಭಿಷೇಕ್ ಅಂಬರೀಶ್ ಅಲ್ಲ. ಅದು ನೀವು ಕೊಟ್ಟಿರೋ ಹೆಸರು, ನನ್ ಅಪ್ಪ ಇಟ್ಟಿರೋ ಹೆಸರು ಅಭಿಷೇಕ್ ಗೌಡ ಎಂದಿದ್ದರು.
ಇನ್ನು ಸಮಲತಾ ಪರ ಮತಯಾಚನೆ ಮಾಡಿದ ಯಶ್ ಮೇ 29ಕ್ಕೆ ಅಂಬರೀಶ್ ಅವರ ಬರ್ತ್​ಡೇ ನಾವು ಮೇ 23ಕ್ಕೇ ಗಿಫ್ಟ್ ಕೊಡೋಣ. ನಾಡಿದ್ದು 18ಕ್ಕೆ ಆ ನಿಟ್ಟಿನಲ್ಲಿನ ಕೆಲಸ ಮಾಡಿ ಅಂದರು.

ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ರೆ ರಕ್ತ ಕುದಿಯದೇ ಇರುತ್ತಾ ? : ನಟ ಯಶ್

RELATED ARTICLES

Related Articles

TRENDING ARTICLES