ಲೋಕಸಭಾ ಚುನಾವಣೆ ಹೊಸ್ತಲಲ್ಲಿ ಎಂ.ಬಿ ಪಾಟೀಲ್ ಅವರ ಪತ್ಯೇಕ ‘ಧರ್ಮ ಪತ್ರ’ ಮತ್ತೆ ಸದ್ದು ಮಾಡುತ್ತಿದೆ. ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಎಂ.ಬಿ ಪಾಟೀಲರು ಸೋನಿಯಾಗಾಂಧಿ ಅವರಿಗೆ ಬರೆದಿದ್ದರು ಎನ್ನಲಾದ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ.
ಲಿಂಗಾಯತ ಧರ್ಮ ಪ್ರತ್ಯೇಕತೆ ಹೋರಾಟದಿಂದ ಪಕ್ಷಕ್ಕೆ ಒಳ್ಳೆಯದಾಗುತ್ತೆ . ವಿಧಾನಸಭೆ ಚುನಾವಣೆ ಜೊತೆ ಲೋಕಸಭೆಯಲ್ಲೂ ಗೆಲ್ಲಬಹುದು ಎಂದು ಎಂಬಿಪಿ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದರು ಎನ್ನಲಾಗಿದ್ದು, ಈ ಹಿಂದೆಯೇ ಇದು ಬಹಿರಂಗವಾಗಿತ್ತು. ಪತ್ರವನ್ನು ಉಲ್ಲೇಖಿಸಿ ಬಿಜೆಪಿ ಮುಖಂಡರು ಎಂಬಿಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.