ಮಂಡ್ಯ : ಗ್ರಾಮದ ಅಭಿವೃದ್ಧಿ ವಿಚಾರವಾಗಿ ಯುವಕನೊಬ್ಬ ಸಚಿವ ಡಿ.ಸಿ ತಮ್ಮಣ್ಣ ಅವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿರೋ ಘಟನೆ ಮಂಡ್ಯದ ಬಿದರಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಅಭಿವೃದ್ಧಿ, ಕಬ್ಬಿನ ಬಾರಿ ವಿಚಾರವಾಗಿ ಯುವಕ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಶ್ನೆ ಮಾಡಿದ ಯುವಕನಿಗೆ ಸಚಿವರು ಮರು ಪ್ರಶ್ನೆ ಮಾಡಿದ್ದಾರೆ. ಆಗ ವಾಗ್ವಾದ ನಡೆದಿದೆ. ನಿಮ್ಮನ್ನು ಗೆಲ್ಲಿಸಿರೋದು ಏಕೆ ಅಂತ ಯುವಕ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಸಚಿವರು, ‘ಕಬ್ಬಿನ ಹಣ ನಾನು ಕೊಡ್ಬೇಕಾ, ಕಾರ್ಖಾನೆ ನಮ್ಮಪ್ಪಂದಾ’? ಅಂತ ಪ್ರಶ್ನಿಸಿ ಬೇಜಬ್ದಾರಿ ತೋರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.