Thursday, April 25, 2024

ರಾಹುಲ್​​ ವಾಪಸ್ ಬಂದ್ರೆ ಬರಲಿ, ಇಲ್ಲ ಸ್ವರ್ಗ ಸೇರಲಿ : ಆಯನೂರು ಮಂಜುನಾಥ್

ದಾವಣಗೆರೆ : ರಾಹುಲ್​ ಗಾಂಧಿಯನ್ನು ಸರ್ಜಿಕಲ್​ ಸ್ಟ್ರೈಕ್​​ ವೇಳೆ ಕರೆದೊಯ್ಯಬೇಕು. ವಾಪಸ್ ಬಂದರೆ ಬರಲಿ, ಇಲ್ಲವೇ ಸೈನಿಕರ ಜೊತೆ ಸ್ವರ್ಗ ಸೇರಲಿ ಅಂತ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ರಾಹುಲ್​ನನ್ನು ಸರ್ಜಿಕಲ್ ಸ್ಟ್ರೈಕ್​ಗೆ ಕರ್ಕೊಂಡು ಹೋಗ್ಬೇಕು. ವಾಪಸ್ ಬಂದ್ರೆ ಬರಲಿ, ಇಲ್ಲವೇ ಸೈನಿಕರ ಜೊತೆ ಸ್ವರ್ಗ ಸೇರಲಿ ಅಂದರು. ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಂಗಚೇಷ್ಟೆ ಮಾಡೋ ಏಕೈಕ ವ್ಯಕ್ತಿ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು. 
7 ಕ್ಷೇತ್ರಗಳಲ್ಲಿ 3ರ ಕ್ಷೇತ್ರಗಳಲ್ಲಿ ಕುಟುಂಬದವೇ ಸ್ಪರ್ಧೆ ಮಾಡಿದ್ದಾರೆ. ಉಳಿದ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳೇ ಇಲ್ಲ ಅಂತ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.

RELATED ARTICLES

Related Articles

TRENDING ARTICLES