Monday, May 20, 2024

ಗ್ರೌಂಡ್​ರಿಪೋರ್ಟ್: ಕುಂದಾನಗರಿಯಲ್ಲಿ ‘ಕೈ’-‘ಕಮಲ’ ಸಮರ – ‘ಫೋರ್’ ಹೊಡೀತಾರಾ ‘ಕೇಸರಿ’ ವೀರ?

ಗ್ರೌಂಡ್​ರಿಪೋರ್ಟ್ 24 : ಬೆಳಗಾವಿ ಲೋಕಸಭಾ ಕ್ಷೇತ್ರ

ಬೆಳಗಾವಿ : ಪ್ರತಿಷ್ಠಿತ ಬೆಳಗಾವಿ ಲೋಕಸಭಾ ಕ್ಷೇತ್ರ ಕೈ-ಕಮಲ ಸಮರಕ್ಕೆ ವೇದಿಕೆಯಾಗಿದೆ. ಸತತ ಮೂರು ಬಾರಿ ಗೆದ್ದಿರೋ ‘ಕೇಸರಿ’ ವೀರ ಸುರೇಶ್ ಅಂಗಡಿ ಅವರು ಫೋರ್ ಹೊಡೆಯುವ ತವಕದಲ್ಲಿದ್ದಾರೆ. ಅವರ ನಾಲ್ಕನೇ ಗೆಲುವಿಗೆ ಬ್ರೇಕ್ ಹಾಕಲು ‘ಕೈ’ ಕಲಿ ಡಾ. ವಿ.ಎಸ್. ಸಾಧುನವರ್​​ ಅಖಾಡಕ್ಕೆ ಇಳಿದಿದ್ದಾರೆ. ಈ ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕಡೆಗಳಲ್ಲಿ ಬಿಜೆಪಿ, 3 ಕಡೆಗಳಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಅರಭಾವಿ ಬಿಜೆಪಿ ಬಾಲಚಂದ್ರ ಜಾರಕಿಹೊಳಿ

ಗೋಕಾಕ್ ಕಾಂಗ್ರೆಸ್ ರಮೇಶ ಜಾರಕಿಹೊಳಿ

ಬೆಳಗಾವಿ ಉತ್ತರ ಬಿಜೆಪಿ ಅನಿಲ ಬೆನಕೆ

ಬೆಳಗಾವಿ ದಕ್ಷಿಣ ಬಿಜೆಪಿ ಅಭಯ ಪಾಟೀಲ

ಬೆಳಗಾವಿ ಗ್ರಾಮೀಣ ಕಾಂಗ್ರೆಸ್​ ಲಕ್ಷ್ಮೀ ಹೆಬ್ಬಾಳ್ಕರ್

ಬೈಲಹೊಂಗಲ ಕಾಂಗ್ರೆಸ್​ ಮಾಹಾಂತೇಶ ಕೌಜಲಗಿ

ಸವದತ್ತಿ ಬಿಜೆಪಿ ಆನಂದ ಮಾಮನಿ

ರಾಮದುರ್ಗ ಬಿಜೆಪಿ ಮಹಾದೇವಪ್ಪಾ ಯಾದವಾಡ

‘ಲೋಕ’ ಇತಿಹಾಸ
1951, 1957, 1962 : ಬಿ.ಎನ್​​ ದಾತರ್, ಕಾಂಗ್ರೆಸ್​
1967 : ಎನ್​.ಎಂ ನಬಿಸಾಬ್​, ಕಾಂಗ್ರೆಸ್
1971, 1977 : ಎ.ಕೆ ಕೊಟ್ರಶೆಟ್ಟಿ, ಕಾಂಗ್ರೆಸ್
1980, 1984, 1989, 1991 : ಎಸ್​.ಬಿ ಸಿದ್ನಾಳ್, ಕಾಂಗ್ರೆಸ್​
1996 : ಶಿವಾನಂದ ಕೌಜಲಗಿ, ಜನತಾದಳ
1998 : ಬಾಬಾಗೌಡ ಪಾಟೀಲ್, ಬಿಜೆಪಿ
1999 : ಅಮರಸಿಂಹ, ಪಾಟೀಲ, ಕಾಂಗ್ರೆಸ್
2004, 2009, 2014 : ಸುರೇಶ್​ ಗೌಡ, ಬಿಜೆಪಿ

ಲೋಕ ಸಮರ-2014
ಸುರೇಶ್​​ ಅಂಗಡಿ –  ಬಿಜೆಪಿ :  5,54,417

ಲಕ್ಷ್ಮೀ ಹೆಬ್ಬಾಳ್ಕರ್ –  ಕಾಂಗ್ರೆಸ್  : 4,78, 557

ಅಂತರ – 75,860

‘ಮತ’ ಗಣಿತ
ಪುರುಷರು – 8,44,400

ಮಹಿಳೆಯರು – 8,13,300

ಒಟ್ಟು – 16,56,700

‘ಜಾತಿ’ ಗಣಿತ
ಲಿಂಗಾಯತರು – 2,00,000

ಕುರುಬರು – 1,75,000

ಎಸ್​ಸಿ, ಎಸ್​ಟಿ  -1,75,000

ಮುಸ್ಲಿಂ – 1,80,000

ಮರಾಠ  -1,65,000

ಕ್ರೈಸ್ತ – 65,000

ಇತರೆ  -2,00,000

ಸುರೇಶ ಅಂಗಡಿ ಅವರಿಗೆ ಪೂರಕ ಅಂಶಗಳೇನು?
ಸರಳ ಸಜ್ಜನಿಕೆಯ ರಾಜಕಾರಣಿ
ಪ್ರಬಲ ಲಿಂಗಾಯತ ಸಮುದಾಯದ ನಾಯಕ
ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರು
ಸತತ 15 ವರ್ಷಗಳ ಕಾಲ ಸಂಸದರಾಗಿ ಆಡಳಿತದ ಹಿನ್ನೆಲೆ
ಕ್ಷೇತ್ರದ ಮತದಾರರ ನಾಡಿಮಿಡಿತ ಅರಿತಿರುವ ನಾಯಕ
ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಉಂಟಾಗಿರುವ ಒಡಕು
ಮೈತ್ರಿ ಪಕ್ಷಗಳ ಅಭ್ಯರ್ಥಿ ಅಷ್ಟೊಂದು ಪ್ರಬಲ ಅಲ್ಲ

ಸುರೇಶ್​ ಅಂಗಡಿ ಅವರಿಗಿರೋ ಆತಂಕಗಳೇನು?
ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸುವುದಿಲ್ಲ ಎಂಬ ಆರೋಪ
ಪಕ್ಷದ ಸಾಮಾನ್ಯ ಕಾರ್ಯಕರ್ತರೊಂದಿಗೆ ಬೆರೆಯದ ವ್ಯಕ್ತಿತ್ವ
ಎಂಜಿನಿಯರಿಂಗ್ ಕಾಲೇಜು, ಸಿಮೆಂಟ್ ಉದ್ಯಮದ ಕಡೆಗೆ ಹೆಚ್ಚು ಒಲವು
ಇನ್ನಷ್ಟು ಜನಪರ ಕಾರ್ಯಗಳನ್ನು ಕೈಗೆತ್ತಿಕೊಂಡಿಲ್ಲವೆಂಬ ಆರೋಪ
ಸ್ವಪಕ್ಷದವರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ
ಖಾಸಗಿ ಸಂಸ್ಥೆಗಳು, ರಾಜಕೀಯ ಮುಖಂಡರುಳ್ಳ ಟ್ರಸ್ಟ್​​ಗಳಿಗೆ ಅನುದಾನ ಬಳಕೆ ಆರೋಪ
ಸಂಸದರ ಅನುದಾನ, ಕೇಂದ್ರದ ನೆರವು ಮಧ್ಯವರ್ತಿಗಳ ಪಾಲು

ಡಾ.ವಿ.ಎಸ್. ಸಾಧುನವರ್​​ ಅವರ ಪೂರಕ ಅಂಶಗಳೇನು?
ಸೋತ ವ್ಯಕ್ತಿಯೆಂದು ಕ್ಷೇತ್ರದಲ್ಲಿ ಜನರಿಂದ ಅನುಕಂಪದ ಅಲೆ
ಜಿಲ್ಲಾ ಮಂತ್ರಿ ಸತೀಶ್ ಜಾರಕಿಹೊಳಿಗೆ ಗೆಲ್ಲಿಸುವ ಹೊಣೆ

ಡಾ.ವಿ.ಎಸ್. ಸಾಧುನವರ್​​ ಆತಂಕಗಳೇನು?
ಆರಂಭದಿಂದಲೂ ಸ್ವಪಕ್ಷದ ಬಂಡಾಯದ ಭಯ
ಜಾರಕಿಹೊಳಿ ಬ್ರದರ್ಸ್ – ಹೆಬ್ಬಾಳ್ಕರ್ ನಡುವಿನ ವೈಮನಸ್ಸು
ಜಿಲ್ಲಾ ಕಾಂಗ್ರೆಸ್​​ನಲ್ಲಿ ಭುಗಿಲೆದ್ದಿರುವ ಬಂಡಾಯದ ಬಾವುಟ
ಜಿಲ್ಲಾ ಶಾಸಕರಲ್ಲಿ ಮೂಡದ ಒಮ್ಮತ
ಸ್ವಪಕ್ಷದ ಮುಖಂಡರಿಂದಲೇ ಸೋಲಿಸುವ ರಣತಂತ್ರ

ಪ್ರಭಾವ ಬೀರುವ ಅಂಶಗಳು
ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣ
ಸಪ್ತನದಿಗಳು ಹರಿದರೂ ನೀರಿಗಾಗಿ ಹಾಹಾಕಾರ
ಬೇಸಿಗೆ ಕಾಲದಲ್ಲಿ ಹನಿ ನೀರಿಗೂ ತತ್ವಾರ
ನೆನೆಗುದ್ದಿಗೆ ಬಿದ್ದಿರೋ ಬಳ್ಳಾರಿ ನಾಲಾ ಯೋಜನೆ
ಮೇಲೇಳದ ಕಳಸಾ ಬಂಡೂರಿ ನಾಲಾ ಯೋಜನೆ
ಕುಂಟುತ್ತ ಸಾಗಿದ ಬೆಣ್ಣೆ ಹಳ್ಳ ಏತ ನೀರಾವರಿ ಯೋಜನೆ
ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದಿರುವುದು

ಸಂಸದರು ಮಾಡಿದ್ದೇನು…?
ಕೇಂದ್ರದಿಂದ ಅನುದಾನದ ಮಹಾಪೂರವೇ ಹರಿದ ಕ್ಷೇತ್ರ
ಬೆಳಗಾವಿಯಲ್ಲೇ ಪ್ರಧಾನಿ ಫಸಲ್ ಬಿಮಾ ಯೋಜನೆ ದೇಶಕ್ಕೆ ಸಮರ್ಪಣೆ
ಬೆಳಗಾವಿಯಲ್ಲಿ ಡಿಜಿಟಿಟಿ, ಪಾಸ್ ಪೋರ್ಟ್ ಕಚೇರಿಗೆ ಮಂಜೂರಾತಿ
ಮೊದಲ ಹಂತದಲ್ಲಿಯೇ ಸ್ಮಾರ್ಟ್ ಸಿಟಿ ಪಟ್ಟಿಗೆ ಬೆಳಗಾವಿ ಸೇರ್ಪಡೆ
ಬೆಳಗಾವಿ ನಗರ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಅನುದಾನ
ಅಮೃತ ಸಿಟಿ ಯೋಜನೆಯಡಿ ಕೇಂದ್ರದಿಂದ 500 ಕೋಟಿ ರೂ. ನೆರವು
3,600 ಕೋಟಿ ರೂ. ವೆಚ್ಚದಲ್ಲಿ ಲೋಂಡಾ-ಮೀರಜ್ ಜೋಡಿ ರೈಲ್ವೆ ಮಾರ್ಗ
ಬೆಳಗಾವಿ ವಿಮಾನ ನಿಲ್ದಾಣ 142 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
ಉಡಾನ್-3 ಯೋಜನೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ಆಯ್ಕೆ
ಸುಗಮ ಸಂಚಾರಕ್ಕೆ 10 ಕೋಟಿ ರೂ. ವೆಚ್ಚದಲ್ಲಿ 4 ರೈಲ್ವೆ ಮೇಲ್ಸೇತುವೆ
80 ವರ್ಷ ಹಳೆಯದಾದ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 18 ಕೋಟಿ ರೂ. ವೆಚ್ಚ
4.2 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ರೈಲು ನಿಲ್ದಾಣ ಅಭಿವೃದ್ಧಿ

ಕ್ಷೇತ್ರ ಪರಿಚಯ
ಕುಂದಾನಗರಿ, ಸಕ್ಕರೆ ಜಿಲ್ಲೆ ಎಂದು ಖ್ಯಾತಿ
ಒಟ್ಟು 8 ವಿಧಾನಸಭಾ ಕ್ಷೇತ್ರ ಹೊಂದಿರುವ ಕ್ಷೇತ್ರ
ಭೌಗೋಳಿಕವಾಗಿ ರಾಜ್ಯದಲ್ಲೇ ಅತಿದೊಡ್ಡ ಕ್ಷೇತ್ರ
ಕೃಷ್ಣಾ, ಮಲಪ್ರಭಾ, ಘಟಪ್ರಭಾ ಹೀಗೆ ಸಪ್ತನದಿಗಳ ತವರಿದು
ಅಧಿಕ ಸಕ್ಕರೆ ಕಾರ್ಖಾನೆ ಹೊಂದಿರುವ ಕ್ಷೇತ್ರವೂ ಹೌದು
ಹಿಂಗಾರು-ಮುಂಗಾರು ಬೆಳೆಗಳೇ ರೈತರ ಜೀವನಾಧಾರ
ಐತಿಹಾಸಿಕ ಕ್ಷೇತ್ರ, ಪ್ರವಾಸಿಗರ ಮನಸೆಳೆಯುವ ತಾಣ
ಸುವರ್ಣ ಸೌಧ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ
ಗೋಕಾಕ್​ ಜಲಪಾತ, ಕಿತ್ತೂರಿನಲ್ಲಿರುವ ರಾಣಿ ಚೆನ್ನಮ್ಮನ ಕೋಟೆ
ಬೈಲಹೊಂಗಲದಲ್ಲಿರುವ ರಾಣಿ ಚೆನ್ನಮ್ಮನ ಸಮಾಧಿ

RELATED ARTICLES

Related Articles

TRENDING ARTICLES