Wednesday, November 6, 2024

ವರ್ಲ್ಡ್​ಕಪ್​ಗೆ ಟೀಮ್​ ಇಂಡಿಯಾ ಪ್ರಕಟ; ವಿರಾಟ್​ ಸಾರಥ್ಯದ ತಂಡದಲ್ಲಿ ಯಾರೆಲ್ಲಾ ಇದ್ದಾರೆ?

ಇಂಗ್ಲೆಂಡ್​ ಮತ್ತು ವೇಲ್ಸ್​ ನಲ್ಲಿ ನಡೆಯಲಿರೋ ಒಡಿಐ ವರ್ಲ್ಡ್​​ಕಪ್​​ಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ವಿರಾಟ್​ ಕೊಹ್ಲಿ ನೇತೃತ್ವದ 15 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರೋಹಿತ್ ಶರ್ಮಾ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದ್ದು, ಅಂಥಾ ಅಚ್ಚರಿಯ ಸೇರ್ಪಡೆಯಾಗಿಲ್ಲ.
ಅನುಭವಿ ಆಟಗಾರ, ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ಬಲ ತುಂಬಿದಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್, ಆರಂಭಿಕ ಆಟಗಾರ ಶಿಖರ್ ಧವನ್​ ಅವರಿಗೆ ಚಾನ್ಸ್ ಸಿಕ್ಕಿದೆ. ಆಲ್​ರೌಂಡರ್​ಗಳಾಗಿ ರವೀಂದ್ರ ಜಡೇಜಾ, ವಿಜಯ್ ಶಂಕರ್, ಹಾರ್ದಿಕ್​ ಪಾಂಡ್ಯ ಮತ್ತು ಕೇದಾರ್​ ಜಾಧವ್​ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್​ ಶಮಿ ವರ್ಲ್ಡ್​ಕಪ್​ ತಂಡದಲ್ಲಿ ಸ್ಥಾನ ಪಡೆದಿರೋ ವೇಗಿಗಳು. ಯಜುವೇಂದ್ರ ಚಾಹಲ್​, ಕುಲ್​ದೀಪ್​ ಯಾದವ್ ವಿಶ್ವಕಪ್​​ನ ಸ್ಪಿನ್​​ ವಿಭಾಗದ ಅಸ್ತ್ರಗಳು. ಇನ್ನು ಹೆಚ್ಚುವರಿ ವಿಕೆಟ್​ ಕೀಪರ್ ಆಗಿ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ.
15 ಸದಸ್ಯರ ತಂಡ ಇಂತಿದೆ : ವಿರಾಟ್​ ಕೊಹ್ಲಿ ( ನಾಯಕ), ರೋಹಿತ್ ಶರ್ಮಾ (ಉಪನಾಯಕ) ಮಹೇಂದ್ರ ಸಿಂಗ್ ಧೋನಿ, ಕೆ.ಎಲ್ ರಾಹುಲ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಕೇದರ್ ಜಾಧವ್​ , ರವೀಂದ್ರ ಜಡೇಜಾ, ವಿಜಯ ಶಂಕರ್, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್​ ಕುಮಾರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್ ಕುಲದೀಪ್ ಯಾದವ್, ದಿನೇಶ್ ಕಾರ್ತಿಕ್.

RELATED ARTICLES

Related Articles

TRENDING ARTICLES