Friday, September 20, 2024

ಸುಮಲತಾಗೆ ಕೈ ಕೊಟ್ರಾ ಕಾಂಗ್ರೆಸ್ ಕಾರ್ಯಕರ್ತರು?

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಭಾರೀ ಬೆಂಬಲ ಸಿಕ್ಕಿತ್ತು. ಕಾಂಗ್ರೆಸ್ ಕಾರ್ಯರ್ತರೂ ಕೂಡ ಸುಮಲತಾ ಅವರಿಗೆ ಕೈ ಜೋಡಿಸಿದ್ದರು. ಆದರೆ ಕೆ.ಆರ್​ ನಗರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ್ದು ಮೈತ್ರಿ ಪಾಳಯಕ್ಕೆ ವರವಾಯ್ತು ಅಂತ ಅನಿಸುತ್ತಿದೆ. ರಾಹುಲ್ ಭೇಟಿ ವರ್ಕೌಟ್​​​ ಆಗಿದೆ ಅಂತ ಹೇಳಲಾಗ್ತಿದ್ದು, ಕಾಂಗ್ರೆಸ್​ ಕಾರ್ಯಕರ್ತರು ಸುಮಲತಾ ಅವರಿಗೆ ಕೈ ಕೊಟ್ರಾ ಅನ್ನೋ ಪ್ರಶ್ನೆ ಮೂಡಿದೆ. 
ಹೌದು ಈ ಪ್ರಶ್ನೆ ಮೂಡೋಕೆ ಕಾರಣ, ಇಂದು ಸುಮಲತಾ ಅವರ ಪ್ರಚಾರದ ವೇಳೆ ಕಳೆದ ದಿನಗಳಂತೆ ಹೆಚ್ಚು ಜನ ಸೇರಿರಲಿಲ್ಲ. ಕೆ.ಆರ್ ನಗರದಲ್ಲಿ ಸುಮಲತಾ ಪ್ರಚಾರದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸೇರಿದ್ದರು. ಇದು ಕಾಂಗ್ರೆಸ್​ ಕಾರ್ಯಕರ್ತರು ಸುಮಲತಾಗೆ ಕೈ ಕೊಟ್ಟರಾ ಅನ್ನೋ ಅನುಮಾನವನ್ನು ಹುಟ್ಟುಹಾಕಿದೆ. ಅತ್ತ ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಅವರ ಹೆಸರನ್ನು ಹೇಳಿಕೊಂಡು ಸುಮಲತಾ ಮತ ಬೇಟೆಯಾಡುತ್ತಿದ್ದರೆ, ಇತ್ತ ರವಿಶಂಕರ್​ ಮಾಜಿ ಸಿಎಂ ಜೊತೆ ಕಾಣಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES