ಮಂಡ್ಯ : ಯಾವನೋ ಯಶ್ ಅಂತೆ, ನಮ್ಮಂಥಾ ನಿರ್ಮಾಪಕರಿದ್ರೆ ಇವೆಲ್ಲಾ ಬದುಕ್ತಾವೆ ಅಂತ ನಟ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಸಿಎಂ, ”ನಾನು ಕಲಾವಿದರು ಅಂತ ಗೌರವ ಕೊಟ್ಟಿದ್ದಕ್ಕೆ, ಇಲ್ಲಿ ಹಳ್ಳಿ ಹಳ್ಳಿಗೆ ಬಂದು, ಯಾವನೋ ಅವ್ನು ರಾಕ್, ಯಾವನೋ ಯಶ್ ಅಂತೆ ಯಶ್..! ನನ್ ಪಕ್ಷಕ್ಕೆ ಕಳ್ರು ಪಕ್ಷ ಅಂತಾನೆ… ನನ್ ಪಕ್ಷನಾ..! ಅವರಿಗಿನ್ನೂ ಗೊತ್ತಿಲ್ಲ. ನನ್ ಕಾರ್ಯಕರ್ತರು ಬಾಯ್ ಮುಚ್ಕೊಂಡು ಇರೋದು, ನಾವ್ ಗಲಾಟೆ ಮಾಡಿದ್ರೆ ಎಲ್ಲಿ ನಮ್ ಕುಮಾರಣ್ಣಗೆ ತೊಂದ್ರೆ ಆಗುತ್ತೋ ಅಂತ. ಪುಣ್ಯಾತ್ಮರು ನೀವು ಅವರು ಏನ್ ಮಾತಾಡಿದ್ರು ಬಾಯ್ ಮುಚ್ಕೊಂಡು ಸುಮ್ನೆ ಇದ್ದೀರಿ. ನಂಗೆ ತೊಂದ್ರೆ ಆಗುತ್ತೆ ಅಂತ. ಇದು ನಂಗೆ ಅರ್ಥ ಆಗುತ್ತೆ ಎಂದರು.
”ಇವರು ಸಿನಿಮಾದಲ್ಲಿ ಪರದೆ ಮೇಲೆ ನೋಡ್ತೀರಲ್ಲಾ..? ನಾನೂ ನಿರ್ಮಾಪಕನೇ.. ಇಂಥವರನ್ನು ಹಾಕೊಂಡು ಪಿಕ್ಚರ್ ತೆಗೆದಿದ್ದೇನೆ. ಎಲ್ಲಿದ್ರೂ ಇವ್ರೆಲ್ಲಾ? ನಮ್ ಅಂತ ನಿರ್ಮಾಪಕರಿದ್ರೆ ಇವೆಲ್ಲಾ ಬದುಕುತ್ತವೆ. ಇವ್ರೆಲ್ಲಾ ಕಷ್ಟಪಟ್ಕಂಡು ಬೆಳೆದಿದ್ದಾರಾ? ಸಿನಿಮಾದಲ್ಲಿ ಪರದೆ ಮೇಲೆ ನೋಡೋದನ್ನು ಸತ್ಯ ಅನ್ಕೋ ಬೇಡಿ. ಜೀವನದಲ್ಲಿ ಪ್ರತಿದಿನ ನೀವು ಅನುಭವಿಸ್ತೀರಲ್ಲಾ ಮನೆಯೊಳಗೆ ಅದು ನಿಜವಾದ ಸತ್ಯ..! ಪರದೆ ಮೇಲೆ ಇರುವುದಲ್ಲ” ಎಂದು ಕಿಡಿಕಾರಿದರು.