ನಿನ್ನೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ತರಾತುರಿಯಲ್ಲಿ ಆಯೋಜಿಸಲು ಹೊರಟ ಕಾಂಗ್ರೆಸ್ ಸಮಾವೇಶ ಪ್ಲಾಫ್ ಶೋ ಆಗಿದೆ..!
ಮಂಗಳೂರಿನ ಕದ್ರಿ ಮೈದಾನದಲ್ಲಿ ಇಂದು ಸಂಜೆ 6.30 ಕಾರ್ಯಕ್ರಮಕ್ಕೆ ಆರಂಭವಾಗಬೇಕಿತ್ತು. ಸ್ಟಾರ್ ಪ್ರಚಾರಕ ಶತ್ರುಘ್ನ ಸಿನ್ಹಾ ಕದ್ರಿ ಮೈದಾನದ ಸಭೆಯಲ್ಲಿ ಮಾತನಾಡಿ, ಬಳಿಕ ಮುಡಿಪು ಸಭೆಗೆ ತೆರಳಬೇಕಿತ್ತು.ಆದರೆ ಕದ್ರಿಯಲ್ಲಿ ಕಾರ್ಯಕರ್ತರ ಸಂಖ್ಯೆ ವಿರಳ ಇದ್ದಿದ್ದನ್ನು ಮನಗಂಡು ಸಚಿವ ಯು. ಟಿ ಖಾದರ್ ವಿಮಾನ ನಿಲ್ದಾಣದಿಂದ ನೇರವಾಗಿ ಮುಡಿಪುವಿಗೆ ಶತ್ರುಘ್ನ ಸಿನ್ಹಾ ಅವರನ್ನು ಕರೆದೊಯ್ದಿದ್ದರು. ಅಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತಾದರೂ, ಬಳಿಕ ಕದ್ರಿ ಮೈದಾನಕ್ಕೆ ಬರಬೇಕಿತ್ತಾದ್ರೂ ಆಗಲೂ ಮೈದಾನದಲ್ಲಿ ಸಭಿಕರಿಗಿಂತ ಜಾಸ್ತಿ ಖಾಲಿ ಕುರ್ಚಿಗಳೇ ಗಮನಸೆಳೆಯುತ್ತಿದ್ದವು..! ಕಾರ್ಯಕ್ರಮ ಆರಂಭಿಸಿದರಾದ್ರೂ ಜಿಲ್ಲಾ ನಾಯಕರ ಮಾತಿಗಷ್ಟೇ ಸೀಮಿತವಾಯಿತು. ಇನ್ನು ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರಕ್ಕೆ ಬರಬೇಕಿದ್ದ ಶತ್ರುಘ್ನ ಸಿನ್ಹಾ ಬರುತ್ತಿಲ್ಲ, ಅದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಐವನ್ ಡಿಸೋಜಾ ಸಭೆಗೆ ತಿಳಿಸಿದರು.
ಕದ್ರಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ನಾಯಕರ ಸಪ್ಪೆ ಮಾತು ಕೇಳಲು ಸಿದ್ದರಿಲ್ಲದೇ ಸಭಿಕರು ಮನೆಗೆ ವಾಪಾಸು ತೆರಳುತ್ತಿದ್ದದ್ದು ಕಂಡುಬಂತು.