Monday, December 23, 2024

ಥ್ಯಾಂಕ್ಯೂ ಮಂಗಳೂರು: ಟ್ವಿಟರ್​ನಲ್ಲಿ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಮಂಗಳೂರು: ನಿನ್ನೆ ಮಂಗಳೂರಿನಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಜನಸ್ಪಂದನೆ ಕಂಡು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವಿಟ್ಟರ್​​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ನಿನ್ನೆ ಪೂರ್ತಿ ಕೇಸರಿಮಯವಾಗಿದ್ದ ಮಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಮಾವೇಶದಲ್ಲಿ ಭಾಗವಹಿಸಿದ್ದರು. “ನಿಮ್ಮ ಪ್ರೀತಿ ಅಭಿಮಾನಗಳಿಗೆ ಧನ್ಯವಾದಗಳು. ಥ್ಯಾಂಕ್ಯೂ ಮಂಗಳೂರು” ಅಂತ ಟ್ವೀಟ್ ಮಾಡಿ, ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಜನಸ್ಪಂದನೆ ಕಂಡು ಖುಷಿಯಾದ ಪ್ರಧಾನಿಯವರು ಪ್ರೊಟೊಕಾಲ್​ ಬಗ್ಗೆ ಚಿಂತಿಸದೇ ಕಾರ್ ಬಾಗಿಲಲ್ಲಿ ನಿಂತು ಜನರತ್ತ ಕೈ ಬೀಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿಯೂ ನಿಂತಿದ್ದ ಅಭಿಮಾನಿಗಳತ್ತ ಕೈ ಬೀಸಿ ಮೋದಿ ಸಂತಸ ವ್ಯಕ್ತಪಡಿಸಿದ್ರು. ಭಾಷಣದ ವೇಳೆಯೂ ಜನಸಾಗರದ ಬಗ್ಗೆ ಮೋದಿ ಪ್ರಸ್ತಾಪಿಸಿದ್ರು.

RELATED ARTICLES

Related Articles

TRENDING ARTICLES