ಮಂಗಳೂರು : ಈಗ ನಡೆಯುತ್ತಿರೋ ಚುನಾವಣೆ ವಂಶೋದಯ ಮತ್ತು ಅಂತ್ಯೋದಯದ ನಡುವಿನ ಚುನಾವಣೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ”ಹೊಸ ಭಾರತ ನಿರ್ಮಾಣಕ್ಕೆ ಚುನಾವಣೆ ಆಗ್ಬೇಕಿದೆ. ದೇಶಕ್ಕಾಗಿ ಮತ ಹಾಕುತ್ತೀರಿ ಅಲ್ವಾ..? ಕಾಂಗ್ರೆಸ್, ಜೆಡಿಎಸ್ನಂತ ಪಕ್ಷಗಳದ್ದು ಪರಿವಾರವಾದ. ನಮ್ಮ ಪಕ್ಷದ್ದು ರಾಷ್ಟ್ರೀಯ ವಾದ. ತಮ್ಮ ಕುಟುಂಬದ ಕಟ್ಟಕಡೆಯ ವ್ಯಕ್ತಿಗೆ ಅಧಿಕಾರದ ಗುರಿ. ಇದು ಪರಿವಾರ್ ವಾದ ಇರುವ ಪಕ್ಷಗಳ ಗುರಿ . ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ನೀಡೋದು ನಮ್ಮ ಪಕ್ಷ . ಅವರ ವಂಶೋದಯ ಪಕ್ಷದ ವರಿಷ್ಠರನ್ನೂ ಕಡೆಗಣಿಸುತ್ತೆ. ಬಿಜೆಪಿಯ ಅಂತ್ಯೋದಯ ಚಾಯ್ವಾಲಾಗೂ ಪ್ರಧಾನಿ ಪಟ್ಟ ನೀಡುತ್ತೆ. ಬಿಜೆಪಿ ಅಂತ್ಯೋದಯ ಬಡತನಕ್ಕೆ ಕಡಿವಾಣ ಹಾಕುತ್ತೆ. ವಂಶವಾದ ದಲ್ಲಾಳಿಗಳ ಜೋಳಿಗೆ ತುಂಬುತ್ತದೆ. ಜನಧನ್ ಆಧಾರದ ಮೂಲಕ ನಾವು ಬಲಿಷ್ಠ ವ್ಯವಸ್ಥೆ ರೂಪಿಸಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ನಮ್ಮದು. ಸಮಾಜದಲ್ಲಿ ಅಪರಿಚಿತರಿಗೂ ಗೌರವ ನೀಡುತ್ತೇವೆ” ಅಂತ ಹೇಳಿದರು.
ಸಾಲು ಮರದ ತಿಮ್ಮಕ್ಕನಿಗೆ ಪದ್ಮಶ್ರೀ ನೀಡಿದ್ದನ್ನುಸ್ಮರಿಸಿದ ಮೋದಿ, ಬುಡಕಟ್ಟು ಜನರ ಸೇವೆ ಸಲ್ಲಿಸೋರಿಗೂ ಉನ್ನತ ಗೌರವ ನೀಡುತ್ತೇವೆ. ಹರಿದ ಚಪ್ಪಲಿ ಧರಿಸಿದವರಿಗೂ ರಾಷ್ಟ್ರಪತಿಗಳ ಗೌರವ ಸಿಗುತ್ತದೆ. ಐದು ವರ್ಷಗಳ ಹಿಂದೆ ಇಂಥ ಕಲ್ಪನೆಯೂ ಇರಲಿಲ್ಲ ಎಂದರು.
ಮೀನುಗಾರರ ಅಭಿವೃದ್ಧಿಗೂ ಕೇಂದ್ರ ಸರ್ಕಾರದ ಕ್ರಮ ಕೈಗೊಳ್ಳಲಿದೆ. ಮೇ 23ಕ್ಕೆ ಕೇಂದ್ರ ಸರ್ಕಾರದಲ್ಲಿ ಹೊಸ ಸರ್ಕಾರ ಬರುತ್ತೆ. ಮೋದಿ ಸರ್ಕಾರ ಅಧಿಕಾರ ಬರುತ್ತದೆ, ಅದಕ್ಕಾಗಿ ನಿರ್ಧಾರ ಮಾಡಲಾಗಿದೆ . ಮೀನುಗಾರ ಸಚಿವಾಲಯ ಪ್ರತ್ಯೇಕ ಸ್ಥಾಪನೆ ಆಗಲಿದೆ . ಮೀನುಗಾರರಿಗೆ ಕ್ರೆಡಿಟ್ ಕಾರ್ಡ್ ಮೂಲಕ ಸೌಲಭ್ಯ ಸಿಗಲಿದೆ . ಮತ್ಸ್ಯ ಸಂಪದ ಯೋಜನೆಗೆ ಬಿಜೆಪಿ ಸಂಕಲ್ಪ ಮಾಡಿದೆ. ನಿಮ್ಮ ಸಹಯೋಗದಿಂದ ಬಿಜೆಪಿ ಸಂಕಲ್ಪಗಳು ಈಡೇರಲಿವೆ . ಅದಕ್ಕಾಗಿ ನಿಮ್ಮ ಸಹಯೋಗ ಅಗತ್ಯವೂ ಆಗಿದೆ ಎಂದು ಮತಯಾಚನೆ ಮಾಡಿದರು.