Wednesday, April 24, 2024

ಫೇಸ್​​ಬುಕ್​ನಲ್ಲಿ ಪಿಎಂ ಮೋದಿಯೇ ನಂಬರ್​ 1 ..!

ನ್ಯೂಯಾರ್ಕ್​​ : ಸೋಶಿಯಲ್​ ಮೀಡಿಯಾದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಹೊಂದಿರೋ ನಾಯಕರ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೇ ನಂಬರ್ 1..! ಮೋದಿ ಅವರ ನಂತರದ ಸ್ಥಾನ, ಅಂದರೆ 2ನೇ ಪ್ಲೇಸ್​ ಅಮೆರಿಕಾದ ಪ್ರೆಸಿಡೆಂಟ್​ ಡೊನಾಲ್ಡ್​ ಟ್ರಂಪ್​ ಅವರಿಗೆ..!
ಗ್ಲೋಬಲ್​ ಕಮ್ಯುನಿಕೇಷನ್ ಏಜೆನ್ಸಿ ಬಿಸಿಡಬ್ಲ್ಯು (Burson Cohn & Wolfe) ‘ಫೇಸ್​ಬುಕ್​ನಲ್ಲಿ 2019ರ ಜಾಗತಿಕ ನಾಯಕರು’ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಮೋದಿ ಫೇಸ್​​ಬುಕ್​ನಲ್ಲಿ 1.37 ಕೋಟಿ ಫಾಲೋವರ್ಸ್​ ಹೊಂದಿದ್ದು, 4.35 ಕೋಟಿ ಲೈಕ್ಸ್ ಬಂದಿವೆ. ಇದರೊಂದಿಗೆ ಅವರು ಫೇಸ್​​ಬುಕ್​ನಲ್ಲಿ ಅತೀ ಹೆಚ್ಚು ಜನಪ್ರಿಯತೆ ಹೊಂದಿರೋ ವಿಶ್ವದ ನಾಯಕ ಎಂದು ಬಿಸಿಡಬ್ಲ್ಯು ಅಧ್ಯಯನದಿಂದ ಬಹಿರಂಗವಾಗಿದೆ.
ಅದೇರೀತಿ ಜನಪ್ರಿಯತೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ 2ನೇ ಸ್ಥಾನದಲ್ಲಿದ್ದಾರೆ. ಅವರ ಅಫಿಶಿಯಲ್​ ಪೇಜ್​ ಅನ್ನು 2.3 ಕೋಟಿ ಲೈಕ್ಸ್​ ಬಂದಿವೆ. 3 ನೇ ಸ್ಥಾನದಲ್ಲಿ ವಿಶ್ವದ ಅತಿ ಸುಂದರ ಮಹಾರಾಣಿ ಅನ್ನೋ ಖ್ಯಾತಿಗೆ ಪಾತ್ರರಾಗಿರೋ ಜೋರ್ಡಾನ್ ರಾಣಿ ರಾನಿಯಾ ಇದ್ದಾರೆ. ಅವರ ಪೇಜ್​ಗೆ 1.69 ಕೋಟಿ ಲೈಕ್ಸ್ ಇವೆ.
ಇನ್ನು ಹೊಸ ವರ್ಷದ ಮೊದಲ ದಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಬ್ರೆಜಿಲ್​ನ ಜೇರ್​ ಬೊಲ್ಸೊನಾರೂ ಫೇಸ್​ಬುಕ್​ನಲ್ಲಿ ಹೆಚ್ಚು ಸಕ್ರಿಯವಾಗಿರೋ ಲೀಡರ್ ಅಂತ ಅಧ್ಯಯನದ ವರದಿ ತಿಳಿಸಿದೆ.

RELATED ARTICLES

Related Articles

TRENDING ARTICLES