Monday, December 9, 2024

ಗ್ರೌಂಡ್​ ರಿಪೋರ್ಟ್​ : ‘ಉದಾಸೀ’ನ ಮಾಡಿದ್ರೆ ಕೇಸರಿಗೆ ‘ಕೈ’ ಕಚ್ಚೋದು ಗ್ಯಾರಂಟಿ..!

ಗ್ರೌಂಡ್​​ರಿಪೋರ್ಟ್​ 21 : ಹಾವೇರಿ – ಗದಗ ಲೋಕಸಭಾ ಕ್ಷೇತ್ರ

ಹಾವೇರಿ/ಗದಗ : ಹಾಲಿ ಸಂಸದ ಶಿವಕುಮಾರ ಉದಾಸಿ ಬಿಜೆಪಿಯ ರಣಕಲಿ. ಡಿ.ಆರ್ ಪಾಟೀಲ್​ ಕಾಂಗ್ರೆಸ್ ಅಭ್ಯರ್ಥಿ. ಇವರಿಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿರುವುದು ಹಾವೇರಿ-ಗದಗ ಲೋಕಸಭಾ ಕ್ಷೇತ್ರ. ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​, 1 ಕ್ಷೇತ್ರದಲ್ಲಿ ಕೆಪಿಜೆಪಿ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಹಾವೇರಿ – ಬಿಜೆಪಿ – ನೆಹರು ಓಲೇಕಾರ

ಬ್ಯಾಡಗಿ – ಬಿಜೆಪಿ – ವಿರೂಪಾಕ್ಷಪ್ಪ

ಹಾನಗಲ್ – ಬಿಜೆಪಿ – ಸಿ.ಎಂ. ಉದಾಸಿ

ಹಿರೇಕೆರೂರು – ಕಾಂಗ್ರೆಸ್ – ಬಿ.ಸಿ. ಪಾಟೀಲ್

ರಾಣೆಬೆನ್ನೂರು – ಕೆಪಿಜೆಪಿ – ಆರ್. ಶಂಕರ್

ಗದಗ –  ಕಾಂಗ್ರೆಸ್ – ಎಚ್.ಕೆ. ಪಾಟೀಲ್

ಶಿರಹಟ್ಟಿ – ಬಿಜೆಪಿ – ರಾಮಣ್ಣ ಲಮಾಣಿ

ರೋಣ -ಬಿಜೆಪಿ – ಕಳಕಪ್ಪ ಬಂಡಿ

ಈ ಕ್ಷೇತ್ರದ ಇತಿಹಾಸವನ್ನು ನೋಡೋದಾದ್ರೆ 1952ರಿಂದ 2008ರವರೆಗೆ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಕ್ಷೇತ್ರ ಲೀನವಾಗಿತ್ತು. 2008ರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಶಿವಕುಮಾರ ಬಳಿಕ ನಡೆದ ಎರಡೂ ಚುನಾವಣೆಯಲ್ಲಿ (2009 ಮತ್ತು 2014) ಬಿಜೆಪಿಯ ಶಿವಕುಮಾರ ಉದಾಸಿ ಗೆಲುವು ಸಾಧಿಸಿದ್ದಾರೆ.

ಲೋಕ ಸಮರ – 2014
ಶಿವಕುಮಾರ್​ ಉದಾಸಿ  -ಬಿಜೆಪಿ  5,66,690

ಸಲೀಂ ಅಹಮದ್  – ಕಾಂಗ್ರೆಸ್ -4,79,219

ಅಂತರ  – 87,571

‘ಮತ’ ಗಣಿತ
ಪುರುಷರು – 8,41,657

ಮಹಿಳೆಯರು – 6,93,940

ಒಟ್ಟು – 15,35, 597

‘ಜಾತಿ’ ಗಣಿತ
ಲಿಂಗಾಯತ – 5,00,000

ಕುರುಬರು – 2,50,000

ಮುಸ್ಲಿಂ – 2,30,000

ಎಸ್​ಸಿ, ಎಸ್​​ಟಿ – 2,00,000

ಇತರೆ – 3,00,000

ಅಭ್ಯರ್ಥಿಗಳ ಬಲಾಬಲ

ಶಿವಕುಮಾರ್​​ ಉದಾಸಿ ಅವರಿಗೆ ಪೂರಕ ಅಂಶಗಳೇನು?
ಪ್ರಧಾನಿ ನರೇಂದ್ರ ಮೋದಿ ಅಲೆ
ಸಂಸದರ ಅನುದಾನ, ಅಭಿವೃದ್ಧಿ ಕಾರ್ಯ
ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ
ಸತತ 2 ಬಾರಿ, ಹ್ಯಾಟ್ರಿಕ್ ಸಾಧಿಸುವ ಹಂಬಲ
ಮಾಜಿ ಸಚಿವ ಸಿ.ಎಂ. ಉದಾಸಿಯವರ ಪುತ್ರ
ಬಡ ಜನರ ಪಾಲಿನ ನೆಚ್ಚಿನ ನಾಯಕ
ಎಲ್ಲಾ ಸಮುದಾಯಗಳ ಜೊತೆ ಉತ್ತಮ ಬಾಂಧವ್ಯ
ಅನುದಾನ ಬಳಕೆಯಲ್ಲಿ ರಾಜ್ಯದ ಸಂಸದರಲ್ಲಿ 2ನೇ ಸ್ಥಾನ
ರಾಷ್ಟ್ರ ಮತ್ತು ರಾಜ್ಯ ನಾಯಕರೊಂದಿಗೆ ಉತ್ತಮ ಸಂಬಂಧ

ಶಿವಕುಮಾರ್​ ಉದಾಸಿ ಅವರಿಗೆ ಆತಂಕಗಳೇನು?
ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್​ ಸಜ್ಜನ್​ , ಶಾಸಕ ನೆಹರು ಓಲೇಕಾರ ಜೊತೆ ಬಹಿರಂಗ ಸಮರ
ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ಸಿಗದಿರುವುದಕ್ಕೆ ಅಸಮಾಧಾನ
10 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಕೆಲಸ ಆಗಿಲ್ಲ
ಕಾಂಗ್ರೆಸ್​​ನಿಂದಲೂ ಲಿಂಗಾಯತ ಸಮುದಾಯದವರನ್ನೇ ಕಣಕ್ಕಿಳಿಸಿರುವುದು
ತಂದೆ ಮತ್ತು ಮಗನ ಬಗ್ಗೆ ಬಿಜೆಪಿಯಲ್ಲಿಯೇ ಅಪಸ್ವರ
ಕೇಂದ್ರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯದಿರುವುದು

ಡಿ.ಆರ್. ಪಾಟೀಲ್ ಅವರಿಗೆ ಪೂರಕ ಅಂಶಗಳೇನು?
ವಿದ್ಯಾರ್ಥಿ ದಿಸೆಯಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಅನುಯಾಯಿ
ಕಾಂಗ್ರೆಸ್ ಪ್ರಭಾವಿ ಮುಖಂಡ, ಎಚ್.ಕೆ. ಪಾಟೀಲ್ ಸಹೋದರ ಸಂಬಂಧಿ
ರಚನಾತ್ಮಕ, ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವ್ಯಕ್ತಿತ್ವ
4 ದಶಕಗಳ ಕಾಲ ಎಪಿಎಂಸಿ ಚುನಾಯಿತ ಅಧ್ಯಕ್ಷರಾಗಿ ದಾಖಲೆ
ರಾಜ್ಯಕ್ಕೆ ಮಾದರಿ ಮಾರುಕಟ್ಟೆ ನಿರ್ಮಿಸಿದ ಹೆಗ್ಗಳಿಕೆ
ಸಹಕಾರಿ ಚಳವಳಿಯಿಂದ ರಾಜಕೀಯವಾಗಿ ಬೆಳೆದ ನಾಯಕ
1992ರಿಂದ 2008ರವರೆಗೆ ಗದಗ ಶಾಸಕರಾಗಿ ಒಳ್ಳೆಯ ಹೆಸರು
ಶಾಸಕರಾಗಿದ್ದಾಗ ಆಶ್ರಯ ಯೋಜನೆಯಡಿ 14 ಸಾವಿರ ಮನೆ ನಿರ್ಮಾಣ

ಡಿ.ಆರ್. ಪಾಟೀಲ್ ಅವರಿಗೆ ಆತಂಕಗಳೇನು?
ಅಲ್ಪಸಂಖ್ಯಾತ ಮುಖಂಡರನ್ನು ಕಡೆಗಣಿಸಿರುವ ಅಪವಾದ
ಎಚ್.ಕೆ. ಪಾಟೀಲ್ ಸಹೋದರ ಸಂಬಂಧಿಗೆ ಮಣೆ ಹಾಕಿರುವ ಆರೋಪ
ಗಟ್ಟಿ ಧ್ವನಿ ಎತ್ತಿ ಕೇಂದ್ರದಿಂದ ಅನುದಾನ ತರಲಾರರು ಎಂಬ ಮಾತು
8 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡೇ ಕ್ಷೇತ್ರಗಳಲ್ಲಿ ‘ಕೈ’ ಶಾಸಕರಿರುವುದು
ಜಿಲ್ಲೆಯಲ್ಲಿ ಮೈತ್ರಿ ಪಕ್ಷ ಜೆಡಿಎಸ್ ನೆಲೆ ಇಲ್ಲದಿರುವುದು
ಬಿ.ಸಿ. ಪಾಟೀಲ್, ಎಚ್.ಕೆ. ಪಾಟೀಲ್​​ಗೆ ಮಂತ್ರಿಗಿರಿ ನೀಡದಿರುವುದು
ಗದಗ, ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವರು ಹೊರಗಿನವರು
ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶಂಕರ್ ಸಚಿವ ಸ್ಥಾನ ಕಿತ್ತುಕೊಂಡಿದ್ದು

ಪ್ರಭಾವ ಬೀರುವ ಅಂಶಗಳು
ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆ
ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೊಳ್ಳದಿರುವುದು
ಕ್ಷೇತ್ರದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆ
ನಗರ, ಪಟ್ಟಣ ಪ್ರದೇಶಗಳಿಗೆ ಹಳ್ಳಿಗರು ವಲಸೆ ಬರುತ್ತಿರುವುದು
ಮಂದಗತಿಯಲ್ಲಿ ಸಾಗುತ್ತಿರುವ ರೈಲ್ವೆ ಕಾಮಗಾರಿ
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಧಾರಣೆ ಸಿಗದಿರುವುದು

ಸಂಸದರು ಮಾಡಿದ್ದೇನು…?
ಗದಗದಿಂದ ಹಟಗಿ 284 ಕಿ.ಮೀ. 1,615 ಕೋಟಿ ವೆಚ್ಚದಲ್ಲಿ ರೈಲ್ವೆ ಕಾಮಗಾರಿ
ಗದಗ-ಕೊಪ್ಪಳ-ಹುಬ್ಬಳ್ಳಿ-ವಾಸ್ಕೋ 308 ಕಿ.ಮೀ 2,127 ಕೋಟಿ ಮೊತ್ತದ ರೈಲ್ವೆ ಕಾಮಗಾರಿ
ರಾಣೆಬೆನ್ನೂರು-ಚಿಕ್ಕಜಾಜೂರು ನಡುವೆ ದ್ವಿಪಥ ಕಾರ್ಯ
ಕರ್ಜಗಿ, ಸವಣೂರು, ದೇವರಗುಡ್ಡ, ಬ್ಯಾಡಗಿಯಲ್ಲಿ ಕೆಳಸೇತುವೆ ನಿರ್ಮಾಣ
ಶಿರಹಟ್ಟಿ ಮಾಗಡಿ, ಹಿರೆಗೊಂದಿಹಾಳ, ಲಕ್ಷ್ಮೇಶ್ವರ ಇತ್ಯಾದಿ ರಸ್ತೆಗಳ ಅಭಿವೃದ್ಧಿ
ಹೊಳೆಇಟಗಿ-ಬ್ಯಾಲಹುಣಸಿ ನಡುವೆ 35 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ
ಗದಗ ಜಿಲ್ಲೆಯಲ್ಲಿ 119.5 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ
ಹಾವೇರಿ ಜಿಲ್ಲೆಗೆ 140.5 ಕೋಟಿ ಅನುದಾನದಲ್ಲಿ ಹಲವು ಕಾಮಗಾರಿ
ರಾಣೆಬೆನ್ನೂರನ್ನು ಅಮೃತ ಸಿಟಿ ಯೋಜನೆಗೆ 96 ಕೋಟಿ ವಿನಿಯೋಗ
ದೊಡ್ಡಕೆರೆ, ಉದ್ಯಾನವನ, ನೀರು ಸರಬರಾಜು ಯೋಜನೆಗೆ ಕಾಯಕಲ್ಪ
ಕ್ಷೇತ್ರದಲ್ಲಿ ಎರಡೂವರೆ ಲಕ್ಷ ಬಡವರಿಗೆ ಅನಿಲ ಸಂಪರ್ಕ, ಸಿಲಿಂಡರ್ ವಿತರಣೆ
ಹಾವೇರಿ-ಗದಗ ಜಿಲ್ಲೆಗೆ ಪಾಸ್​ಪೋರ್ಟ್​​ ಸೇವಾ ಕೇಂದ್ರ ಸ್ಥಾಪನೆ
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಹಲವಾರು ಕಾರ್ಯಕ್ರಮ

ಕ್ಷೇತ್ರ ಪರಿಚಯ
ಏಲಕ್ಕಿ ಕಂಪಿನ ನಾಡು
ಬೀಜೋತ್ಪನ್ನದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಜಿಲ್ಲೆ
ವಿಶ್ವವಿಖ್ಯಾತ ಬ್ಯಾಡಗಿ ಮೆಣಸಿನ ಕಾಯಿ
ಕರುನಾಡಿಗೆ ಸಂಗೀತ ವಿದ್ಯೆ ನೀಡಿದ ಹಾನಗಲ್
ಸರ್ವಜ್ಞನ ನಾಡು ಹಿರೇಕೆರೂರು, ನವಾಬರ ಸವಣೂರು
ಸಂತ ಶಿಶುನಾಳ ಷರೀಫ್​​ ಅವರ ತವರೂರು ಶಿಗ್ಗಾಂವಿ
ಅಮರಶಿಲ್ಪಿ ಜಕಣಾಚಾರಿ ಕೆತ್ತಿದ ಶಿಲ್ಪಕಲೆಗಳ ನೆಲೆವೀಡು
ಒಂದೆಡೆ ಬಯಲು, ಮತ್ತೊಂದೆಡೆ ದಟ್ಟವಾದ ಅರಣ್ಯ

RELATED ARTICLES

Related Articles

TRENDING ARTICLES