Monday, December 23, 2024

ಮೇ 30ರೊಳಗೆ ದೇಣಿಗೆ ವಿವರ ಸಲ್ಲಿಸಲು ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ

ನವದೆಹಲಿ: ಮೇ 30ರ ಒಳಗೆ ರಾಜಕೀಯ ಪಕ್ಷಗಳು ದೇಣಿಗೆ ವಿವರಗಳನ್ನು ಸಲ್ಲಿಸಬೇಕು ಅಂತ ಸುಪ್ರೀಂ ಕೋಟ್​ ಆದೇಶಿಸಿದೆ. ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವಂತೆ ಹೇಳಿರುವ ಕೋರ್ಟ್ ದೇಣಿಗೆ ವಿವರ ನೀಡುವಂತೆ ಸೂಚನೆ ನೀಡಿದೆ. ದಾಖಲೆ ಸಲ್ಲಿಸಲು ಮೇ 30 ಡೆಡ್​ಲೈನ್​ ನಿಗದಿ ಮಾಡಲಾಗಿದೆ.

ಎಲ್ಲಾ ರಾಜಕೀಯ ಪಕ್ಷಗಳು ದೇಣಿಗೆ ವಿವರಗಳನ್ನು ನೀಡುವುದು ಕಡ್ಡಾಯವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್​ ಖಡಕ್​ ಆದೇಶ ನೀಡಿದೆ. “ಸೀಲ್ಡ್​ ಕವರ್​ಗಳಲ್ಲಿ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಬೇಕು. ಮೇ 19ಕ್ಕೆ ಚುನಾವಣೆ ಮುಕ್ತಾಯ, ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ಪ್ರಕಟಿಸಿದ ಒಂದೇ ವಾರದಲ್ಲಿ ದೇಣಿಗೆ ವಿವರ ಸಲ್ಲಿಸಬೇಕು. ರಾಜಕೀಯ ಪಕ್ಷಗಳ ಹಣಕಾಸು ವಹಿವಾಟು ಪಾರದರ್ಶಕ ಆಗಿರಬೇಕು” ಎಂದು ಕೋರ್ಟ್ ಕಟ್ಟುನಿಟ್ಟಾಗಿ ಆದೇಶಿಸಿದೆ. ಕೋರ್ಟ್​ ಖರ್ಚು ವೆಚ್ಚ ಮತ್ತು ದೇಣಿಗೆ ಬಗ್ಗೆ ಚುನಾವಣಾ ಆಯೋಗವೂ ಹದ್ದಿನ ಕಣ್ಣಿರಿಸಿದೆ.

RELATED ARTICLES

Related Articles

TRENDING ARTICLES