Friday, July 19, 2024

ಬಿಜೆಪಿಗೆ ವೋಟ್​​ ಹಾಕಿ ಅಂದ್ರು ಡಿ.ಕೆ ಶಿವಕುಮಾರ್..!

ತುಮಕೂರು : ಕಾಂಗ್ರೆಸ್​ ನಾಯಕ, ಡಿ.ಕೆ ಶಿವಕುಮಾರ್​ ಅವರು ಬಿಜೆಪಿ ಪರ ಮತಯಾಚನೆ ಮಾಡಿದ್ದಾರೆ..! ಇದು ನಂಬಲು ಕಷ್ಟವಾದರೂ ನಂಬಲೇ ಬೇಕು..!
ತುಮಕೂರು ಜಿಲ್ಲೆಯ ಕುಣಿಗಲ್​ನಲ್ಲಿ ಭಾಷಣ ಮಾಡುವಾಗ ಡಿಕೆಶಿ, ಬಿಜೆಪಿಗೆ ವೋಟ್ ಹಾಕಲು ಹೇಳಿದ್ರು..! ಅರೆ, ಡಿಕೆಶಿ ಬಿಜೆಪಿ ಪರ ಬ್ಯಾಟ್​ ಬೀಸಿದ್ರಾ? ವೋಟ್​ ಕೇಳಿದ್ರಾ? ಕಾಂಗ್ರೆಸ್ ಬಗ್ಗೆ ಅಥವಾ ದೋಸ್ತಿ ಬಗ್ಗೆ ಡಿಕೆಶಿಗೆ ಸಿಟ್ಟಾ ಅಂತ ಕೇಳ್ತಿದ್ದೀರಾ? ಅಲ್ಲ, ಡಿಕೆಶಿಗೆ ಕಾಂಗ್ರೆಸ್​ ಮೇಲೆ ಸಿಟ್ಟಾಗಿ, ಬಿಜೆಪಿ ಕಡೆ ಒಲವು ತೋರಿ ಮತ ಕೇಳಿದ್ದಲ್ಲ…ಭಾಷಣದ ಭರಾಟೆಯಲ್ಲಿ ಮಾಡಿಕೊಂಡ ಯಡವಟ್ಟು.
ಭಾಷಣ ಮಾಡುತ್ತಾ.. ಮಾತಿನ ಭರದಲ್ಲಿ ಜೆಡಿಎಸ್​, ಕಾಂಗ್ರೆಸ್​ಗಿಂತ ಹೆಚ್ಚು ವೋಟ್​ ಅನ್ನು ಬಿಜೆಪಿಗೆ ಹಾಕಬೇಕು ಅಂತ ಕೇಳಿದ್ರು. ಈಗ ಡಿಕೆಶಿಯ ಈ ಮಾತಿನ ತುಣುಕು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

RELATED ARTICLES

Related Articles

TRENDING ARTICLES