Wednesday, November 6, 2024

ಸುಳ್ಳು ಹೇಳೋದ್ರಲ್ಲಿ ಮೋದಿ ಫೇಮಸ್​ ಅಂದ್ರು ಸಿದ್ದರಾಮಯ್ಯ

ಚಿಕ್ಕಮಗಳೂರು: ಸುಳ್ಳು ಹೇಳೋದ್ರಲ್ಲಿ ಪ್ರಧಾನಿ ಮೋದಿ ಅವರು ತುಂಬಾ ಫೇಮಸ್ಸು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಕಡೂರಿನಲ್ಲಿ ಪ್ರಚಾರ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, “ಬಿಜೆಪಿಯವರು ಸುಳ್ಳೇ ಸತ್ಯ ಮಾಡಲು ಪ್ರಯತ್ನ ಮಾಡ್ತಾರೆ. ಬಿಜೆಪಿಯವರನ್ನು ಯಾರು ಕೂಡ ನಂಬಬೇಡಿ” ಎಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲುವನ್ನು ಸಾಧಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಅವರು, “ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರಿನಲ್ಲಿ ಗೆದ್ದೇ ಗೆಲ್ತೇವೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರವನ್ನೂ ನಾವು ಗೆಲ್ಲುತ್ತೇವೆ” ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES