Sunday, December 8, 2024

ಗ್ರೌಂಡ್​​​​​​​​​​​​​ರಿಪೋರ್ಟ್​​​ : ಯಾರಿಗೆ ‘ರಾಯರ’ ಪ್ರಸಾದ?

ಗ್ರೌಂಡ್​​ರಿಪೋರ್ಟ್​ 20 : ರಾಯಚೂರು ಲೋಕಸಭಾ ಕ್ಷೇತ್ರ
ರಾಯಚೂರು : ಪ್ರತಿಷ್ಠಿತ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿ.ವಿ ನಾಯಕ್ ಕಾಂಗ್ರೆಸ್ ಅಭ್ಯರ್ಥಿ. ಇವರ ಪ್ರತಿಸ್ಪರ್ಧಿ ಬಿಜೆಪಿ ರಣಕಲಿ ಅಮರೇಶ್ವರ ನಾಯಕ್.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕಡೆಗಳಲ್ಲಿ ಬಿಜೆಪಿ, 3 ಕಡೆಗಳಲ್ಲಿ ಕಾಂಗ್ರೆಸ್​, 1 ಕಡೆ ಜೆಡಿಎಸ್​​ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ರಾಯಚೂರು ನಗರ – ಬಿಜೆಪಿ – ಡಾ.ಶಿವರಾಜ್ ಪಾಟೀಲ್
ರಾಯಚೂರು ಗ್ರಾಮಾಂತರ – ಕಾಂಗ್ರೆಸ್​ -ಬಸನಗೌಡ ದದ್ದಲ್
ದೇವದುರ್ಗ – ಬಿಜೆಪಿ – ಕೆ ಶಿವನಗೌಡ ನಾಯಕ್
ಮಾನ್ವಿ – ಜೆಡಿಎಸ್ -​ ರಾಜ ವೆಂಕಟಪ್ಪ ನಾಯಕ
ಲಿಂಗಸುಗೂರು – ಕಾಂಗ್ರೆಸ್​ – ಡಿ.ಎಸ್ ಹೂಲಗೇರಿ
ಸುರಪುರ – ಬಿಜೆಪಿ – ರಾಜೂಗೌಡ
ಶಹಾಪುರ – ಕಾಂಗ್ರೆಸ್​​ – ಶರಣಬಸ್ಸಪ್ಪ ದರ್ಶನಾಪುರ
ಯಾದಗಿರಿ – ಬಿಜೆಪಿ  – ವೆಂಕಟರೆಡ್ಡಿ ಮುದ್ದನಾಳ

ಪಕ್ಷಗಳ ಬಲಾಬಲ
ಇದುವರೆಗೆ ನಡೆದಿರೋ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​​ 13 ಬಾರಿ, ಬಿಜೆಪಿ 1, ಜನತಾ ದಳ 1, ಸ್ವತಂತ್ರ ಪಾರ್ಟಿ ಅಭ್ಯರ್ಥಿಗಳು 1 ಬಾರಿ ಗೆಲುವು ಸಾಧಿಸಿದ್ದಾರೆ.
1952 : ಕೃಷ್ಣಮಾಚಾರಿ, ಕಾಂಗ್ರೆಸ್​
1957 : ಬಿ ಎಸ್ ಮೇಲೂ ಕೋಟೆ, ಕಾಂಗ್ರೆಸ್​
1962 : ಜಗನ್ನಾಥ್ ರಾವ್, ಕಾಂಗ್ರೆಸ್
1967 : ಆರ್​.ವಿ ನಾಯಕ್​, ಸ್ವತಂತ್ರ ಪಾರ್ಟಿ
1971 : ಪಂಪನ್​​ಗೊಡ್ಡ ಸಕ್ರೆಪ್ಪ ಗೌಡ ಅತ್ನೂರ್, ಕಾಂಗ್ರೆಸ್
1977 : ರಾಜಶೇಖರ್​​​​​ ಮಲ್ಲಪ್ಪ, ಕಾಂಗ್ರೆಸ್
1980, 1984 : ಬಿ.ವಿ ದೇಸಾಯಿ, ಕಾಂಗ್ರೆಸ್
1989 : ಆರ್​. ಅಂಬಣ್ಣ ನಾಯಕ್ ದೊರೆ, ಕಾಂಗ್ರೆಸ್
1991 : ಎ. ವೆಂಕಟೇಶ್​ ನಾಯಕ್, ಕಾಂಗ್ರೆಸ್
1996 : ರಾಜ ರಂಗಪ್ಪ ನಾಯಕ್, ಜನತಾ ದಳ
1998, 1999, 2004 : ಎ. ವೆಂಕಟೇಶ್​ ನಾಯಕ್, ಕಾಂಗ್ರೆಸ್
2009 : ಸಣ್ಣ ಪಕೀರಪ್ಪ, ಬಿಜೆಪಿ
2014 : ಬಿ.ವಿ ನಾಯಕ್​​ , ಕಾಂಗ್ರೆಸ್

2014 – ರಾಯಚೂರು ಲೋಕ ಸಮರ

ಬಿ.ವಿ. ನಾಯಕ್ ಕಾಂಗ್ರೆಸ್​ 4,43,659

ಕೆ. ಶಿವನಗೌಡ ನಾಯಕ್ ಬಿಜೆಪಿ 4,42,160

ಅಂತರ 1,499

‘ಮತ’ ಗಣಿತ

ಪುರುಷರು 9,39,752

ಮಹಿಳೆಯರು 9,53,457

ತೃತೀಯ ಲಿಂಗಿಗಳು 367

ಒಟ್ಟು 18,93,576

 

‘ಜಾತಿ’ ಗಣಿತ

ಪರಿಶಿಷ್ಟ ಪಂಗಡ 3,60,000

ಪರಿಶಿಷ್ಟ ಜಾತಿ 3,40,000

ಲಿಂಗಾಯತ 2,65,000

ಮುಸ್ಲಿಂ 2,55,000

ಕುರುಬರು 2,40,000

ಗಂಗಾಮತಸ್ಥರು 2,00,000

ಇತರೆ 5,50,000

ಅಭ್ಯರ್ಥಿಗಳ ಬಲಾಬಲ
ಬಿ.ವಿ ನಾಯಕ್​ ಅವರಿಗೆ ಪೂರಕ ಅಂಶಗಳೇನು?

ರಾಜ್ಯದಲ್ಲಿ ಅಧಿಕಾರದಲ್ಲಿರುವ ದೋಸ್ತಿ ಪಕ್ಷದ ಒಮ್ಮತದ ಅಭ್ಯರ್ಥಿ
4 ಬಾರಿ ‘ಲೋಕ’ ಸಮರ ಗೆದ್ದ ತಂದೆ ದಿ. ಎ. ವೆಂಕಟೇಶ್ ನಾಯಕ್ ಪ್ರಭಾವ
3 ಕ್ಷೇತ್ರಗಳಲ್ಲಿ ‘ಕೈ’​ ಶಾಸಕರು, ಮತ್ತೊಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಇದ್ದಾರೆ
ಸರಳ, ಸಜ್ಜನಿಕೆಯ ವ್ಯಕ್ತಿತ್ವದ ರಾಜಕಾರಣಿ
ಶೀಘ್ರವೇ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸುವುದು
ಕ್ಷೇತ್ರ ವ್ಯಾಪ್ತಿಯ ಶಾಸಕರ ಜೊತೆಗೆ ಸ್ನೇಹ ಬಾಂಧವ್ಯ

ಬಿ. ವಿ. ನಾಯಕ್ ಅವರಿಗೆ ಆತಂಕಗಳೇನು?
ಪ್ರಧಾನಿ ನರೇಂದ್ರ ಮೋದಿ ಪರ ಇರುವ ಅಲೆ
ನಿರೀಕ್ಷಿತ ಮಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಆಗದಿರುವುದು
ಮರಳು ದಂಧೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು
ಕ್ಷೇತ್ರಕ್ಕೆ ಹೆಚ್ಚುವರಿ ಅನುದಾನ ತರುವಲ್ಲಿ ವಿಫಲ
ಸ್ಥಳೀಯ ಕಾಂಗ್ರೆಸ್​ ನಾಯಕರಲ್ಲಿ ಒಳಜಗಳ
‘ಪಾಕ್​​ ಎಂಬ ಬಡ ರಾಷ್ಟ್ರದ ಮೇಲೆ ಗೂಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ’ ಎಂಬ ಹೇಳಿಕೆ
ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್ ಅವಮಾನ

ಅಮರೇಶ್ವರ್ ನಾಯಕ್ ಅವರಿಗೆ ಪೂರಕ ಅಂಶಗಳೇನು?
ದೇಶಾದ್ಯಂತ ಇರುವ ಮೋದಿ ಅಲೆ ಜಿಲ್ಲೆಗೂ ವ್ಯಾಪಿಸಿರುವುದು
ಮೋದಿ ಪರ ಇರುವ ಯುವ ಪೀಳಿಗೆಯ ಒಲವು
ಸರಳ ವ್ಯಕ್ತಿತ್ವ, ರಾಜಕೀಯದ ಅನುಭವ
4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿರುವುದು
ಬಿ. ವಿ. ನಾಯಕ್ ಅವರ ವೈಫಲ್ಯ

ಅಮರೇಶ್ವರ್ ನಾಯಕ್​​ ಅವರಿಗೆ ಆತಂಕಗಳೇನು?
ಕ್ಷೇತ್ರದ ಜನರೊಂದಿಗೆ ಅತಿಹೆಚ್ಚು ಒಡನಾಟ ಇಲ್ಲದಿರುವುದು
ಅನ್ಯ ಪಕ್ಷದಿಂದ ಬಿಜೆಪಿಗೆ ಬಂದಿದ್ದರಿಂದ ಹಳೆಯ ನಾಯಕರ ಸಹಕಾರವಿಲ್ಲ
ಜಿಲ್ಲೆಯ ಜನರಿಗೆ ಮುಖ ಪರಿಚಯ ಇಲ್ಲದೇ ಇರುವುದು
ಜಿಲ್ಲಾ ಬಿಜೆಪಿಯಲ್ಲಿ ಸದೃಢ ಸಂಘಟನೆಯ ಕೊರತೆ

ಪ್ರಭಾವ ಬೀರುವ ಅಂಶಗಳು
ಸಮರ್ಪಕ ನೀರಾವರಿ ಯೋಜನೆ ಜಾರಿ ಆಗಿಲ್ಲ
ತುಂಗಭದ್ರಾ ಬೆಳೆಗಾರರಿಗೆ 2ನೇ ಬೆಳೆಗೆ ನೀರು ತರುವಲ್ಲಿ ವಿಫಲ
ಜಿಲ್ಲೆಗೆ ಐಐಟಿ ತಂದಿಲ್ಲ, ತ್ರಿಬಲ್ ಐಐಐಟಿ ಜಾರಿಯಲ್ಲಿ ವಿಳಂಬ
ಬರಗಾಲಕ್ಕೆ ಶಾಶ್ವತ ಪರಿಹಾರ ಕೃಷಿಗೆ ಒತ್ತು ನೀಡಿಲ್ಲ
ಕೈಗಾರಿಕಾ ಕ್ಷೇತ್ರದಲ್ಲಿ ಯಾವುದೇ ರೀತಿಯ ಪ್ರಗತಿ ಇಲ್ಲ
ಉದ್ಯೋಗಕ್ಕಾಗಿ ಗುಳೆ ಹೋಗುತ್ತಿರುವ ಯುವ ಸಮುದಾಯ
ಪ್ರತಿ ಗ್ರಾಮದಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವುದು
ತುಂಗಭದ್ರಾ ನೀರಾವರಿಗೆ 2ನೇ ಬೆಳೆಗೆ ನೀರು ಹರಿಸದೇ ಇರುವುದು
ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು
ಬೆಳೆ ನಷ್ಟ ಪರಿಹಾರದಂತಹ ಸಮಸ್ಯೆ ನಿಭಾಯಿಸಲು ವಿಫಲ

ಸಂಸದರು ಮಾಡಿದ್ದೇನು? (ಅನುದಾನ ಬಳಕೆ)

ಸಾಂಸ್ಕೃತಿಕ ಭವನ, ಸಮುದಾಯ ಭವನಗಳ ನಿರ್ಮಾಣ
ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪುಟ್ಟ ರಸ್ತೆ ಕಾಮಗಾರಿಗಳು
ಬೆರಳೆಣಿಕೆಯಷ್ಟು ಸೇತುವೆಗಳ ನಿರ್ಮಾಣ
ಕೆಲವೇ ಕೆಲವು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ
ರೈಲ್ವೆ ಅಂಡರ್​ಪಾಸ್ ನಿರ್ಮಾಣ, ನಗರದ ಪ್ರಮುಖ ರಸ್ತೆ ನಿರ್ಮಾಣ

ಕ್ಷೇತ್ರದ ಪರಿಚಯ

ವಿದ್ಯುತ್​ ಉತ್ಪಾದನಾ ಕೇಂದ್ರಗಳಾದ YTPS ಮತ್ತು RTPS ರಾಯಚೂರಿನಲ್ಲಿವೆ
ದೇಶಕ್ಕೆ ಚಿನ್ನ ಕೊಡುವ ಪ್ರಮುಖ ಹಟ್ಟಿ ಚಿನ್ನದ ಗಣಿ ಇರುವುದು ಲಿಂಗಸುಗೂರಿನಲ್ಲಿ
ಕೃಷ್ಣಾ, ತುಂಗಭದ್ರಾ ನದಿ ಹರಿಯುವ ಜಿಲ್ಲೆ
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೌನೇಶ್ವರ ಸ್ವಾಮಿ ನೆಲೆಸಿರುವ ತಿಂತಿಣಿ
12ನೇ ಶತಮಾನದ ಶ್ರೀಗುರು ಅಲ್ಲಮ ಪ್ರಭುಲಿಂಗೇಶ್ವರ ದೇವಸ್ಥಾನ ಗೂಗಲ್
ಗುರುಗುಂಟದ ಶ್ರೀ ಅಮರೇಶ್ವರ ದೇವಸ್ಥಾನ
ಜಿಲ್ಲೆಯ ಪಕ್ಕದ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ

RELATED ARTICLES

Related Articles

TRENDING ARTICLES