ಮಂಡ್ಯ : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಂಡ್ಯ ರಣಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮತ್ತೆ ಗುಡುಗಿದ್ದಾರೆ .
”ಸಂದೇಶ್ ನಾಗರಾಜ್ ಹೋಟೆಲ್ನಲ್ಲಿ ಕೂತು ಹುನ್ನಾರ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಚಾರಕ್ಕೆ ಬಂದಾಗ ಕಲ್ಲು ಹೊಡೆಸಿಕೊಂಡು ಆಸ್ಪತ್ರೆಗೆ ಸೇರಿಕೊಳ್ಳೋ ಹುನ್ನಾರವೂ ನಡೆಸಿದ್ದಾರೆ..! ನನಗೆ ಕುತಂತ್ರ ರಾಜಕಾರಣ ಗೊತ್ತಿಲ್ಲ ಜನರ ಮಧ್ಯೆಯೇ ಬೆಳೆದಿದ್ದೇನೆ. ಪಕ್ಷೇತರ ಅಭ್ಯರ್ಥಿ ಬಂದಾಗ ಇನ್ನೊಂದು ಮುಖ ತೋರಿಸಿ ಅಂತಾ ಕೇಳಿ” ಅಂತ ಸುಮಲತಾ ಅವರ ವಿರುದ್ಧ ಕಿಡಿಕಾರಿದ್ದಾರೆ.