Wednesday, January 22, 2025

ಸಿಎಂ ವಿರುದ್ಧ ಸುಮೋಟೊ ಕೇಸು ದಾಖಲಿಸಲು ಒತ್ತಾಯ..!

ಶಿವಮೊಗ್ಗ: ಮಾಧ್ಯಮಗಳ ಮೇಲೆ ಹಲ್ಲೆ ನಡೆದರೆ ನಾನು ಜವಬ್ದಾರನಲ್ಲ ಎಂದು ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ನಿನ್ನೆ ಅಡ್ವಾನ್ಸಾಗಿ ಹೇಳಿದ ನಂತರ ಮಾಧ್ಯಮಗಳ ಮೇಲೆ ಹಲ್ಲೆ ನಡೆದಿದೆ.  ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸುಮೋಟೋ ಕೇಸು ದಾಖಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧವಾಗಿರುವುದು ಎಲ್ಲರ ಅನುಭವಕ್ಕೂ ಬಂದಿದೆ.  ಕುಮಾರಸ್ವಾಮಿ ಹಲವಾರು ಬಾರಿ, ಮಾಧ್ಯಮದ ವಿರುದ್ಧ ಅನಗತ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಮೂರನೇ ಮಹಡಿಗೆ ಬಾರದಂತೆ, ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದರು. ರಾಜ್ಯದ ಮುಖ್ಯಮಂತ್ರಿ ಚುನಾವಣೆ ಸಂದರ್ಭದಲ್ಲಿ, ಮತದಾರ ಹಾಗೂ ಅಭ್ಯರ್ಥಿಗಳ ನಡುವಿನ ಸಂವಹನ ಕೊಂಡಿಯಾಗಿರುವ ಮಾಧ್ಯಮಕ್ಕೆ ಬೆದರಿಕೆ ಹಾಕಿದ್ದಾರೆ. ಈಗ ಹಲ್ಲೆಯ ಪ್ರಯತ್ನ ನಡೆದಿದೆ. ಅಡ್ವಾನ್ಸ್​ ಆಗಿ ಮಾಧ್ಯಮಗಳಿಗೆ ವಾರ್ನಿಂಗ್​ ಮಾಡೋ ಮೂಲಕ, “ನನ್ನ ಪರ ಮಾತನಾಡಬೇಕು. ನನ್ನ ಮಗನ ಪರ, ನನ್ನ ಅಪ್ಪನ ಪರ ಮಾತನಾಡಬೇಕು. ಇಲ್ಲದೆ ಹೋದರೆ ಹಲ್ಲೆಯಾಗುತ್ತೆ” ಎಂದು ಹೇಳಿಕೆ ನೀಡಿರುವುದು ಸರಿಯಲ್ಲ” ಎಂದು ಹೇಳಿದ್ರು.

“ಮುಖ್ಯಮಂತ್ರಿಯಾಗಿ ಸಂವಿಧಾನದತ್ತ ಜಾಗದಲ್ಲಿ ಕುಳಿತು ಮಾಧ್ಯಮಗಳ ಮೇಲೆ ಹಲ್ಲೆ ನಡೆಯಲು ಪ್ರಚೋದನೆ ನೀಡಿರುವುದು ಸರಿಯಲ್ಲ.  ನಡೆದ ಘಟನೆ ಮತ್ತು ಹೇಳಿಕೆ ಆಧಾರಿಸಿ ಪೊಲೀಸರು ಸುಮೋಟೋ ಕೇಸು ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES