ಅಮರಾವತಿ : 7 ಹಂತದ ಮಹಾ ಚುನಾವಣೆಗೆ ಚಾಲನೆ ಸಿಕ್ಕಿದೆ. 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಕ್ಷೇತ್ರಗಳ ಜೊತೆಗೆ ಆಂಧ್ರಪ್ರದೇಶ, ಸಿಕ್ಕಿಂ, ಒಡಿಶಾ, ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ.
ಆಂಧ್ರಪ್ರದೇಶದಲ್ಲಿ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಅಭ್ಯರ್ಥಿ ಒಬ್ಬರು ಅತಿರೇಕದ ವರ್ತನೆ ತೋರಿ ಪೊಲೀಸರ ಅತಿಥಿಯಾಗಿದ್ದಾರೆ. ಅಲ್ಲಿನ ಅನಂತಪುರ ಜಿಲ್ಲೆಯ ಗುಂಟಕಲ್ ವಿಧಾನಸಭಾ ಕ್ಷೇತ್ರದ ಜನಸೇನಾ ಅಭ್ಯರ್ಥಿ ಮಧುಸೂದನ್ ಗುಪ್ತಾ ಇವಿಎಂ ಅನ್ನೇ ನೆಲಕ್ಕೆ ಎಸೆದು ಪುಡಿ ಮಾಡಿ ಅತಿರೇಕದ ವರ್ತನೆ ತೋರಿದವರು.
ಗುತ್ತಿ ಮತಗಟ್ಟೆಯಲ್ಲಿ ಮತದಾನದ ವೇಳೆ ಮತಯಂತ್ರದಲ್ಲಿ ಹೆಸರುಗಳು ಸರಿಯಾಗಿ ಕಾಣ್ತಿಲ್ಲ ಅಂತ ಆಕ್ರೋಶಗೊಂಡ ಮಧುಸೂದನ್ ಒಂದು ಯಂತ್ರವನ್ನು ಎತ್ತಿ ನೆಲಕ್ಕೆ ಚಚ್ಚಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ಇವಿಎಂಗಳನ್ನು ಪುಡಿ ಮಾಡೋದಾಗಿ ಹೇಳಿದ್ದು, ಪೊಲೀಸರು ಕೂಡಲೇ ಅವರನ್ನು ವಶಕ್ಕೆ ಪಡೆದಿದ್ದಾರೆ.
#WATCH Jana Sena MLA candidate Madhusudhan Gupta smashes an Electronic Voting Machine (EVM) at a polling booth in Gooty, in Anantapur district. He has been arrested by police. #AndhraPradesh pic.twitter.com/VoAFNdA6Jo
— ANI (@ANI) April 11, 2019