Saturday, September 14, 2024

ಅಜ್ಜಿ ಮನೆಗೆ ಭೇಟಿ ನೀಡಿದ ನಟ ಯಶ್..!

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರದಲ್ಲಿ ಬ್ಯುಸಿ ಆಗಿರೋ ನಟ ರಾಕಿಂಗ್ ಸ್ಟಾರ್ ಯಶ್ ಅಜ್ಜಿಯೊಬ್ಬರ ಮನವಿಗೆ ಓಗೊಟ್ಟು ಅವರ ಮನೆಗೆ ಭೇಟಿ ನೀಡಿದ್ದಾರೆ.
ಮದ್ದೂರು ತಾಲೂಕಿನ ಅಣ್ಣಳ್ಳಿ ದೊಡ್ಡಿ ಗ್ರಾಮದಲ್ಲಿ ಪ್ರಚಾರದ ವೇಳೆ ಯಶ್ ಅವರನ್ನು ಮನೆಗೆ ಬರುವಂತೆ ಅಜ್ಜಿಯೊಬ್ಬರು ಆಹ್ವಾನಿಸಿದರು. ಅಜ್ಜಿ ಕೆಂಪಮ್ಮ ಅವರ ಪ್ರೀತಿಗೆ ತಲೆಬಾಗಿದ ಯಶ್ ಅವರ ಮನೆಗೆ ಭೇಟಿಕೊಟ್ಟು, ಬಾಳೆ ಹಣ್ಣು ತಿಂದು, ಅಜ್ಜಿಯ ಆಶೀರ್ವಾದ ಪಡೆದರು.
ಸುಮಲತಾ ಅವರಿಗೆ ವೋಟ್ ಹಾಕುವಂತೆ ಅಜ್ಜಿಯಲ್ಲಿ ಯಶ್ ಮನವಿ ಮಾಡಿದ್ರು. ಸುಮಲತಾ ಅವರಿಗೇ ವೋಟ್​ ಹಾಕುವುದಾಗಿ ಅಜ್ಜಿ ಭರವಸೆ ನೀಡಿದರು.

RELATED ARTICLES

Related Articles

TRENDING ARTICLES