Sunday, September 24, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯ'ಉದ್ಯೋಗ ಸೃಷ್ಟಿಸ್ತೀವಿ ಅಂದವ್ರು, ಈಗ ಪಕೋಡ ಮಾರಿ ಜೀವನ ನಡೆಸ್ಬೋದು ಅಂತಿದ್ದಾರೆ'..!

‘ಉದ್ಯೋಗ ಸೃಷ್ಟಿಸ್ತೀವಿ ಅಂದವ್ರು, ಈಗ ಪಕೋಡ ಮಾರಿ ಜೀವನ ನಡೆಸ್ಬೋದು ಅಂತಿದ್ದಾರೆ’..!

ಶಿವಮೊಗ್ಗ: ಚುನಾವಣೆಗೂ ಮುನ್ನ ಹತ್ತು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಅದರೇ, ಪಕೋಡ ಮಾರಾಟ ಮಾಡಿ ಕೂಡ ಜೀವನ ನಡೆಸಬಹುದು ಎನ್ನುತ್ತಾರೆ. ಎಂಜಿನಿಯರಿಂಗ್ ಮಾಡಿಕೊಂಡು ಪಕೋಡ ಮಾರಾಟ ಮಾಡಲು ಸಾಧ್ಯವೇ…? ಅಂತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ ಅವರು, “ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು ಎಂದು ಬಿಜೆಪಿ ತಿರ್ಮಾನಿಸಿದ್ರೆ, ಬಿಜೆಪಿ ಮುಕ್ತ ಮಾಡಲು ಜನರು ತೀರ್ಮಾನಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಮುಕ್ತ ವಾತವರಣ ಕಾಣುತ್ತಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿರುವುದು ಬಿಜೆಪಿಯ ಕೊಡುಗೆ. ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಗೊಂಡಿದೆ. ಯಾರು ಇಂಪೋರ್ಟೆಡ್ ಹಾಗೂ ಯಾರು ಎಕ್ಸ್ಪೋರ್ಟೆಡ್ ಎಂದು 23 ರಂದೇ ಗೊತ್ತಾಗಲಿದೆ” ಎಂದಿದ್ದಾರೆ.

“17 ಜನ ಸಂಸದರಿದ್ದು ಕೂಡ ರಾಜ್ಯದ ಕಾವೇರಿ, ಮಹದಾಯಿ ಬಗ್ಗೆ ಯಾರೂ ಮಾತನಾಡಿಲ್ಲ. ನಮ್ಮದು ಅಪ್ಪ-ಮಕ್ಕಳ ಪಕ್ಷ ಎಂದು ರಾಘವೇಂದ್ರ ಟೀಕಿಸುತ್ತಾರೆ. ಹಾಗಾದ್ರೇ ನಿಮ್ಮದು ಯಾವ ಪಕ್ಷ..? ನಿಮ್ಮನ್ನು ಬಿಟ್ಟು ಬೇರೆ ಯಾರು ಜಿಲ್ಲೆಯಲ್ಲಿ ಅಧಿಕಾರ ಪಡೆದಿದ್ದಾರೆ. ಯಡಿಯೂರಪ್ಪ ನಿಮ್ಮನ್ನು ಬಿಟ್ಟು ಜಿಲ್ಲೆಯಲ್ಲಿ ಬೇರೆ ಯಾರನ್ನು ಬೆಳೆಸಿದ್ದಾರೆ..? ಜನ ಆಶೀರ್ವಾದ ಮಾಡ್ದಾಗ, ಮಾರ್ಯಾದೆಯಿಂದ ಕೆಲಸ ಮಾಡಬೇಕು. ದೇಶದ ಮತದಾರರು ಕೂಡ ಗೊಂದಲದಲ್ಲಿದ್ದಾರೆ. ಗೊಂದಲದಿಂದಾಗಿ ಜನ ನೋಟಾ ಮತ ಚಲಾಯಿಸಿದರೂ ಅಚ್ಚರಿಯಿಲ್ಲ” ಎಂದು ಹೇಳಿದ್ರು.

LEAVE A REPLY

Please enter your comment!
Please enter your name here

Most Popular

Recent Comments