Sunday, September 24, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಗ್ರೌಂಡ್​ರಿಪೋರ್ಟ್​​ : ಹ್ಯಾಟ್ರಿಕ್ ತವಕದಲ್ಲಿ ವಿಜಯಪುರದ ‘ಕೇಸರಿ’ ವೀರ

ಗ್ರೌಂಡ್​ರಿಪೋರ್ಟ್​​ : ಹ್ಯಾಟ್ರಿಕ್ ತವಕದಲ್ಲಿ ವಿಜಯಪುರದ ‘ಕೇಸರಿ’ ವೀರ

ಗ್ರೌಂಡ್​ರಿಪೋರ್ಟ್​​ 19 : ವಿಜಯಪುರ ಲೋಕಸಭಾ ಕ್ಷೇತ್ರ

ವಿಜಯಪುರ : ವಿಜಯಪುರದ ಲೋಕಕಣದಲ್ಲಿ ಹ್ಯಾಟ್ರಿಕ್​ ಗೆಲುವನ್ನು ಎದುರು ನೋಡುತ್ತಿರುವ ರಮೇಶ್​ ಜಿಗಜಿಣಗಿ ಬಿಜೆಪಿ ಅಭ್ಯರ್ಥಿ. ಇವರ ಪ್ರತಿಸ್ಪರ್ಧಿ ಜೆಡಿಎಸ್​ನ ಸುನಿತಾ ಚೌಹಾಣ್. ಗುಮ್ಮಟ ನಗರಿಯಲ್ಲಿ ಮತದಾರರು ಇವರಿಬ್ಬರಲ್ಲಿ ಯಾರಿಗೆ ‘ವಿಜಯ’ಮಾಲೆ ಹಾ​​ಕುತ್ತಾರೆ ಅನ್ನೋದು ಕುತೂಹಲ.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 3ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​, 2ರಲ್ಲಿ ಜೆಡಿಎಸ್​ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಮುದ್ದೇಬಿಹಾಳ – ಬಿಜೆಪಿ – ಎ.ಎಸ್.ಪಾಟೀಲ್ ನಡಹಳ್ಳಿ

ದೇವರ ಹಿಪ್ಪರಗಿ – ಬಿಜೆಪಿ – ಸೋಮನಗೌಡ ಪಾಟೀಲ್ ಸಾಸನೂರ್

ವಿಜಯಪುರ  – ಬಿಜೆಪಿ – ಬಸನಗೌಡ ಪಾಟೀಲ್ ಯತ್ನಾಳ

ಬಸವನ ಬಾಗೇವಾಡಿ  -ಕಾಂಗ್ರೆಸ್  -ಶಿವಾನಂದ ಪಾಟೀಲ್

ಬಬಲೇಶ್ವರ – ಕಾಂಗ್ರೆಸ್​  -ಎಮ್.ಬಿ.ಪಾಟೀಲ್

ಇಂಡಿ – ಕಾಂಗ್ರೆಸ್ – ಯಶವಂತರಾಯಗೌಡ ಪಾಟೀಲ್

ನಾಗಠಾಣ – ಜೆಡಿಎಸ್​ – ದೇವಾನಂದ ಚವ್ಹಾಣ

ಸಿಂದಗಿ – ಜೆಡಿಎಸ್​ – ಎಮ್.ಸಿ.ಮನಗೂಳಿ

ಇದುವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 9 ಬಾರಿ ಕಾಂಗ್ರೆಸ್​, 4 ಬಾರಿ ಬಿಜೆಪಿ, ತಲಾ ಒಂದು ಬಾರಿ ಜೆಡಿಎಸ್​, ಸ್ವತಂತ್ರಪಾರ್ಟಿ, ಜನತಾ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ.

1951 : ಡುಬೆ ರಾಜರಾಮ್ ಗಿರ್​ದಾರ್​ಲಾಲ್​, ಕಾಂಗ್ರೆಸ್
1957 : ಸುಗಂಧಿ ಮುರಿಗಪ್ಪ ಸಿದ್ಧಪ್ಪ, ಕಾಂಗ್ರೆಸ್
1962 : ರಾಜರಾಮ್​ ಗಿರಿದಾರ್​ಲಾಲ್​ ಡುಬೆ, ಕಾಂಗ್ರೆಸ್
1967 : ಜಿ.ಡಿ ಪಾಟೀಲ್​, ಸ್ವತಂತ್ರ ಪಾರ್ಟಿ
1971 : ಭೀಮಪ್ಪ ಯಲ್ಲಪ್ಪ ಚೌಧರಿ, ಕಾಂಗ್ರೆಸ್
1977, 1980 : ಚೌಧರಿ ಕಾಳಿಂಗಪ್ಪ ಭೀಮಣ್ಣ, ಕಾಂಗ್ರೆಸ್
1984, 1989, 1991 : ಜಿ.ಬಿ ಕಡಪ್ಪ, ಕಾಂಗ್ರೆಸ್
1996 : ಪಿ.ಬಿ ರುದ್ರಗೌಡ, ಜನತಾದಳ
1998 : ಎಂ.ಬಿ ಪಾಟೀಲ್​, ಕಾಂಗ್ರೆಸ್
1999 : ಬಸವನಗೌಡ ಪಾಟೀಲ್ ಯತ್ನಾಳ್, ಬಿಜೆಪಿ
2009, 2014 : ರಮೇಶ್ ಜಿಗಜಿಣಗಿ, ಬಿಜೆಪಿ

ವಿಜಯಪುರ ಲೋಕ ಸಮರ – 2014

ರಮೇಶ್ ಜಿಗಜಿಣಗಿ – ಬಿಜೆಪಿ – 4,71,757
ಪ್ರಕಾಶ್​ ರಾಥೋಡ್​ – ಕಾಂಗ್ರೆಸ್​ -4,01,938
ಅಂತರ -69,819

‘ಮತ’ ಗಣಿತ

ಪುರುಷರು 9,11,667
ಮಹಿಳೆಯರು 8,63,930
ತೃತೀಯ ಲಿಂಗಿಗಳು 242
ಒಟ್ಟು 17,75,839

‘ಜಾತಿ’ ಗಣಿತ

ಎಸ್.ಸಿ, ಎಸ್.ಟಿ – 3,40,000

ಗಾಣಿಗ – 2,46,000

ಕುರುಬ – 1,26,000

ಲಿಂಗಾಯತ ಪಂಚಮಸಾಲಿ – 1,20,000

ಮುಸ್ಲಿಂ – 3,86,000 ‘

ರೆಡ್ಡಿ ಸಮುದಾಯ -1,86,000

ಜಂಗಮರು – 30,000

ಜೈನ್ ಮಾರವಾಡಿ – 50,000

ಕ್ರೈಸ್ತರು – 10,000

ಇತರೆ -3,00,000

ಅಭ್ಯರ್ಥಿಗಳ ಬಲಾಬಲ
ರಮೇಶ್​ ಜಿಗಜಿಣಗಿಗೆ ಪೂರಕ ಅಂಶಗಳೇನು?
ಪ್ರಧಾನಿ ನರೇಂದ್ರ ಮೋದಿ ಅಲೆ
ಸರಳ ಸಜ್ಜನಿಕೆಯ ರಾಜಕಾರಣಿ
40 ವರ್ಷಗಳ ರಾಜಕೀಯ ಅನುಭವ
ಎಲ್ಲಾ ಸಮುದಾಯಗಳ ಜೊತೆ ಉತ್ತಮ ಸಂಬಂಧ
ಮೈತ್ರಿ ಸರ್ಕಾರದ ಕೆಲ ಸಚಿವ, ಶಾಸಕರೊಂದಿಗೂ ವೈಯಕ್ತಿಕ ಬಾಂಧವ್ಯ
ಜಿಲ್ಲೆಯಲ್ಲಿ ಬಿಜೆಪಿ ಅಲೆ ಸೃಷ್ಟಿಯಾಗುತ್ತಿರುವುದು
ಸ್ಥಳೀಯ ಸಂಸ್ಥೆಗಳು ಬಿಜೆಪಿಯ ಆಡಳಿತದಲ್ಲಿರುವುದು

ರಮೇಶ್ ಜಿಗಜಿಣಗಿಗೆ ಆತಂಕಗಳೇನು?

ಬಿಜೆಪಿಯಲ್ಲಿಯೇ ಸೃಷ್ಟಿಯಾದ ಭಿನ್ನಮತ
ನಗರ ಶಾಸಕ ಬಸನಗೌಡ ಪಾಟೀಲ್ ಅವರೊಂದಿಗೆ ಒಳಜಗಳ
ಆದರ್ಶ ಗ್ರಾಮ ಸಂಪೂರ್ಣ ವಿಫಲವಾಗಿರುವುದು
ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಯೋಜನೆ ವಿಫಲವಾಗಿರುವುದು
ವಿಮಾನ ನಿಲ್ದಾಣ ಕಾಮಗಾರಿ ಕೇವಲ ಅಡಿಗಲ್ಲಿಗೆ ಸೀಮಿತ
ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅವ್ಯವಹಾರದ ಆರೋಪ
ಪ್ರಬಲ ಬಲಗೈ ಸಮುದಾಯದ ಬಿಎಸ್​ಪಿ ಅಭ್ಯರ್ಥಿ ಕಣಕ್ಕಿಳಿದಿರುವುದು
ಅನುದಾನ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಆರೋಪ

ಸುನೀತಾ ಚೌಹಾಣ್​​ಗೆ ಪೂರಕ ಅಂಶಗಳೇನು?
ಪ್ರಬಲವಾಗಿರುವ ಮೈತ್ರಿ ಸರ್ಕಾರದ ಸಂಪೂರ್ಣ ಬೆಂಬಲ
ಜಿಲ್ಲೆಯಲ್ಲಿ ಐದು ಮಂದಿ ಮೈತ್ರಿ ಶಾಸಕರು ಇರುವುದು
ಸುನಿತಾ ಚೌಹಾಣ್​​ ಪತಿ ದೇವಾನಂದ್ ಚೌಹಾಣ್​ ಕೂಡ ಪ್ರಬಲ ಶಾಸಕರಾಗಿರುವುದು
ಲಂಬಾಣಿ ಸಮುದಾಯದ ಬೆಂಬಲ
ಎಲ್ಲ ಸಮುದಾಯಗಳೊಂದಿಗೂ ಬೆರೆಯುವ ಸ್ವಭಾವ

ಸುನಿತಾ ಚೌಹಾಣ್​ಗೆ ಆತಂಕಗಳೇನು?

ಅನುಭವವಿಲ್ಲದ ರಾಜಕೀಯದಿಂದ ಬಿಜೆಪಿಗೆ ವರದಾನ
ವಿಜಯಪುರ ಜಿಲ್ಲೆಯ ಜನರಿಗೆ ಅಪರಿಚಿತರು
ಪತಿಯ ಹೆಸರಿನಿಂದಲೇ ಪರಿಚಿತರಾಗಬೇಕು
ವಿಜಯಪುರ ಲೋಕ ಚಿತ್ರಣ

ಪ್ರಭಾವ ಬೀರುವ ಅಂಶಗಳು
ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆ
ಯಾವುದೇ ಕೈಗಾರಿಕೆಗಳು ಇಲ್ಲ
ಪಂಚ ನದಿಗಳು ಹರಿದರೂ ಕುಡಿಯುವ ನೀರಿಗಾಗಿ ಹಾಹಾಕಾರ
ಗ್ರಾಮೀಣ ಭಾಗಗಳಲ್ಲಿ ರಸ್ತೆ ಸರಿಯಾಗಿ ಇಲ್ಲದಿರುವುದು
ಸಾಕಷ್ಟು ಪ್ರವಾಸಿ ತಾಣಗಳಿದ್ದರೂ ಅಭಿವೃದ್ಧಿ ಕಾರ್ಯಗಳು ಆಗದೇ ಇರುವುದು

ಸಂಸದರು ಮಾಡಿದ್ದೇನು..?

46 ಸಾವಿರ ಕೋಟಿ ರೂ. ವೆಚ್ಚದ ಕೂಡಗಿ ವಿದ್ಯುತ್​ ಸ್ಥಾವರ ಅಭಿವೃದ್ಧಿ ಕಾಮಗಾರಿ
76 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ 1.10 ಕೋಟಿ ರೂ. ವೆಚ್ಚದ ಕಾಮಗಾರಿ
ರಸ್ತೆಗಳ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ಮೊತ್ತದ ಕಾಮಗಾರಿ
1,872 ಕೋಟಿ ವೆಚ್ಚದ ರೈಲ್ವೆ ದ್ವಿಪಥ​ ಕಾಮಗಾರಿ
5 ಓವರ್ ಬ್ರಿಡ್ಜ್​ ಕಾಮಗಾರಿಗಳಿಗೆ ಚಾಲನೆ
ಒಟ್ಟು 60 ಕೋಟಿ ವೆಚ್ಚದಲ್ಲಿ ಇಂಡಿ ಪಟ್ಟಣದ ಓವರ್ ಬ್ರಿಡ್ಜ್​ ಕಾಮಗಾರಿಗೆ ಶಂಕುಸ್ಥಾಪನೆ
ಸವನಹಳ್ಳಿ ಬಳಿ 72 ಕೋಟಿ ರೂ. ವೆಚ್ಚದಲ್ಲಿ ಓವರ್ ಬ್ರಿಡ್ಜ್​ ಕಾಮಗಾರಿ
21.12 ಕೋಟಿ ವೆಚ್ಚದಲ್ಲಿ ಇಂಡಿ ರೋಡ್ ಬಳಿ ರೈಲ್ವೆ ಮೇಲ್ ಸೇತುವೆ ಕಾಮಗಾರಿಗೆ ಅಡಿಗಲ್ಲು

ಕ್ಷೇತ್ರ ಪರಿಚಯ

ಶಿಲ್ಪ ಕಲೆಗೆ ಹೆಸರಾದ ಜಿಲ್ಲೆ
ವಿಶ್ವದ ಎರಡನೇ ಅತಿ ದೊಡ್ಡ ಮಾನವ ನಿರ್ಮಿತ ಗೋಲ್​ ಗುಂಬಜ್
ವೈಭವದ ಭವ್ಯ ಸ್ಮಾರಕಗಳಾದ ಅರಮನೆಗಳು, ಮಸೀದಿಗಳು, ಸಂಗೀತ ಮಹಲ್ ಜಿಲ್ಲೆಯಲ್ಲಿವೆ
ಪುರಾತನ ಶ್ರೀ ಸಿದ್ದೇಶ್ವರ ದೇವಾಲಯ, ಸಹಸ್ರ ಫಣಿ ಪಾರ್ಶ್ವನಾಥಮೂರ್ತಿ ದೇವಾಲಯ
ತೊರವಿ ಲಕ್ಷ್ಮೀ ನರಸಿಂಹ ದೇವಾಲಯ, 770 ಲಿಂಗಗಳ ಗುಡಿ ಹೆಚ್ಚು ಪ್ರಸಿದ್ಧ
ಅತ್ಯಂತ ಸುಂದರವಾದ ಇಬ್ರಾಹಿಂ ರೌಝಾ ಐತಿಹಾಸಿಕ ತಾಣ
ಇತಿಹಾಸ ಪ್ರಸಿದ್ಧ ಜುಮ್ನಾ ಮಸೀದಿ, ಬಾರಾ ಕಮಾನು ತಾಣಗಳು

LEAVE A REPLY

Please enter your comment!
Please enter your name here

Most Popular

Recent Comments